ವಿಜಯಪುರ: ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಹಲವು ಗ್ರಾಮಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಭೂಕಂಪನದ ಅನುಭವ ಆಗಿದೆ. ಮುಂಜಾನೆ ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವ ಕೆಲ ಗ್ರಾಮಗಳಲ್ಲಿ ಆಗಿದೆ.
ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ತಿಕೋಟಾ ತಾಲೂಕಿನ ಹಲವು ಭಾಗದಲ್ಲಿ ಭಾರೀ ಸದ್ದಿನೊಂದಿಗೆ ಬೆಳ್ಳಂಬೆಳಗ್ಗೆಯೇ ಭೂಕಂಪದ ಅನುಭವವಾಗಿದೆ. ಬೆಳಗ್ಗೆ 6:22ರ ಸುಮಾರಿಗೆ 3ರಿಂದ 4 ಸೆಕೆಂಡ್‌ಗಳ ಕಾಲ ತಮಗೆ ಭೂಮಿ ಕಂಪಿಸಿದ ಅನುಭವವಾಗಿದೆ. ನಾವು ಕಳೆದ ಮೂವತ್ತು ವರ್ಷದ ಇತಿಹಾಸದಲ್ಲೇ ಇಷ್ಟು ದೊಡ್ಡ ಮಟ್ಟದ ಸದ್ದು ಕೇಳಿರಲಿಲ್ಲ ಅಂತ ಗ್ರಾಮಸ್ಥರೆಲ್ಲ ಹೇಳುತ್ತಿದ್ದಾರೆ.
ಮುಂಜಾನೆ 2 ಬಾರಿ ಭೂಮಿ ಕಂಪಿಸಿದೆ ಎನ್ನಲಾಗಿದೆ. ಮುಂಜಾನೆ 6 ಗಂಟೆ 22 ನಿಮಿಷಕ್ಕೆ 4.9ರಷ್ಟು ತೀವ್ರತೆಯಲ್ಲಿ ಭೂಮಿ ಕಂಪಿಸಿದ್ರೆ, ಮುಂಜಾನೆ 6 ಗಂಟೆ 24 ನಿಮಿಷಕ್ಕೆ 4.6ರಷ್ಟು ತೀವ್ರತೆಯಲ್ಲಿ ಭೂಕಂಪನವಾಗಿದೆ. 6.22ರ ಭೂಕಂಪನ ಕೇಂದ್ರ ಮಹಾರಾಷ್ಟ್ರದ ಸಾಂಗಲಿಯಾದರೆ, 6.24ರ ಭೂಕಂಪನ ಕೇಂದ್ರ ಮಹಾರಾಷ್ಟ್ರದ ಸೊಲ್ಲಾಪುರ ಆಗಿದೆ.
PublicNext
09/07/2022 08:04 am