ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನದಲ್ಲಿ ಕಂಪಿಸಿದ ಭೂಮಿ

ಹಾಸನ: ಹಾಸನ ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದೆ. ಅರಕಲಗೂಡು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಏಕಾಏಕಿ ಭೂ ಕಂಪನವಾಗುತ್ತಿದ್ದಂತೆ ನಿದ್ರೆಯಲ್ಲಿದ್ದ ಜನ ಶಾಕ್ ಆಗಿದ್ದಾರೆ.

ಬೆಳಗಿನ ಜಾವ ಸುಮಾರು 4:38ರ ಸುಮಾರಿಗೆ ಈ ಲಘು ಕಂಪನವಾಗಿದೆ. ತಾಲ್ಲೂಕಿನ ಮುದ್ದನಹಳ್ಳಿ, ಅರಕಲಗೂಡು ಪಟ್ಟಣ, ಹನೆಮಾರನಹಳ್ಳಿ,ಕಾರಳ್ಳಿ ಗ್ರಾಮಗಳಲ್ಲಿ ಭೂ ಕಂಪನವಾಗಿದೆ.

ಹೊಳೆನರಸೀಪುರ ತಾಲ್ಲೂಕಿನಲ್ಲೂ ಭೂಮಿ ನಡುಗುತ್ತಿದ್ದಂತೆ ಜನ ಮನೆಯಿಂದ ಹೊರ ಓಡಿ ಬಂದಿದ್ದಾರೆ. ನಿನ್ನೆ (ಬುಧವಾರ) ಅಫ್ಘಾನಿಸ್ತಾನದಲ್ಲಿ ಭೀಕರ ಭೂ ಕಂಪನದ ಬಳಿಕ ರಾಜ್ಯದಲ್ಲಿಯೂ ಭೂಮಿ ಕಂಪಿಸುತ್ತಿದ್ದಂತೆ ಜನ ತೀವ್ರ ಆತಂಕಗೊಂಡಿದ್ದಾರೆ.

Edited By : Shivu K
PublicNext

PublicNext

23/06/2022 08:36 am

Cinque Terre

86.05 K

Cinque Terre

2