ಹಾಸನ: ಹೊಟ್ಟೆಪಾಡಿಗಾಗಿ ಕಾಡು ಪ್ರಾಣಿ ತಮ್ಮ ಹಸಿವು ನೀಗಿಸಿಕೊಳ್ಳಲು ನಾಡಿಗೆ ಬಂದು ಬೇಟೆಯಾಡುತ್ತಿವೆ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹೊಸಕೊಪ್ಪಲು ಗ್ರಾಮದಲ್ಲಿ ಕಾಡು ಪ್ರಾಣಿ ನಾಡ ಪ್ರಾಣಿಯನ್ನು ಹೊತ್ತೊಯ್ದಿದೆ. ಚಿರತೆಯೊಂದು ಕಾಂಪೌಂಡ್ ಮೇಲೆ ಕುಳಿತು ಹೊಂಚು ಹಾಕಿ ನಾಯಿ ಮರಿಯನ್ನು ಹೊತ್ತೊಯ್ಯುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದೇವೇಗೌಡರ ಮನೆಯಲ್ಲಿ ಸಾಕಿದ್ದ ನಾಯಿಯನ್ನು ಬೇಟೆಯಾಡಿದ ಚಿರತೆ ಹಗಲು ವೇಳೆಯೇ ಗ್ರಾಮದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದೆ. ಅನೇಕ ದಿನಗಳಿಂದ ಚಿರತೆಯು ಹೀಗೆ ಕುರಿ, ಮೇಕೆ, ನಾಯಿಗಳನ್ನು ಹೊತ್ತೊಯುತ್ತಿದೆ. ಚಿರತೆ ಹಾವಳಿಯಿಂದ ಹೊಸಕೊಪ್ಪಲು ಜನ ಆತಂಕಗೊಂಡಿದ್ದಾರೆ. ಕೂಡಲೇ ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
PublicNext
12/05/2022 11:05 pm