ಶಿವಮೊಗ್ಗ: ಮನೆಯೊಂದರ ಟಾಯ್ಲೆಟ್‌ನಲ್ಲಿ ನಾಗರಹಾವು ಕಾಣಸಿಕೊಂಡಿದೆ. ನಿತ್ಯಕರ್ಮಕ್ಕೆ ತೆರಳಿದಾಗ ಸಡನ್ನಾಗಿ ಭುಸ್ ಭುಸ್ ನಾಗಪ್ಪನನ್ನು ಕಂಡ ಮನೆ ಮಂದಿ ಹೌಹಾರಿದ್ದಾರೆ. ಶಿವಮೊಗ್ಗದ ಶಿವಪ್ಪನಾಯಕ ಬಡಾವಣೆಯಲ್ಲಿಯ ಅಡಿಕೆ ಮಂಡಿ ವರ್ತಕ ಶಬರೀಶ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ.
ಟಾಯ್ಲೆಟ್ ಪಿಟ್‌ನಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಉರಗ ಪ್ರೇಮಿ ಸ್ನೇಕ್ ಕಿರಣ್ ನಾಗರಹಾವು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಹಾವು ಹಿಡಿದ ಕೂಡಲೇ ಪೂಜೆ ಮಂಗಳಾರತಿ ಮಾಡಿದ ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.
PublicNext
04/01/2022 12:50 pm