ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್: ಬನ್ನೇರುಘಟ್ಟದಲ್ಲಿ ಬೃಹತ್ ಅಟ್ಲಾಸ್ ಪತಂಗ ಪತ್ತೆ!

ಆನೇಕಲ್: ಚಿಟ್ಟೆಯಂತೆಯೇ ಇರುವ ಈ ಜೀವಿ ಚಿಟ್ಟೆಯಲ್ಲ, ಬದಲಿಗೆ ಇದೊಂದು ಪ್ರಭೇದಕ್ಕೆ ಸೇರಿದ ಪತಂಗ. ಕಂದು, ಕೆಂಪು, ನೇರಳೆ, ಹಳದಿ ವರ್ಣ ರೆಕ್ಕೆಗಳ ಈ ಬೃಹತ್ ಪತಂಗ ಕಂಡು ಬಂದದ್ದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ.ಇದನ್ನು ಅಟ್ಲಾಸ್ ಪತಂಗ ಎಂದೂ ಕರೆಯುತ್ತಾರೆ.

ಏಷ್ಯಾದಲ್ಲಿಯೇ ಅತಿ ದೊಡ್ಡ ಅಟ್ಲಾಸ್ ಪತಂಗ ಇದಾಗಿದ್ದು, ಸುಮಾರು 12 ಸೆ.ಮೀ. ಉದ್ದವಿದೆ. ಸಾಮಾನ್ಯವಾಗಿ ಪಶ್ಚಿಮ ಘಟ್ಟಗಳಲ್ಲಿ ಅಪರೂಪಕ್ಕೊಮ್ಮೆ ಕಾಣಸಿಗುವ ಈ ಪತಂಗ ನಿಶಾಚರಿಯಾಗಿದ್ದು, ರಾತ್ರಿ ವೇಳೆ ಹೆಚ್ಚು ಹಾರಾಟ ನಡೆಸುತ್ತವೆ. ದೈತ್ಯಾಕಾರದ ಪತಂಗ ‘ಅಟ್ಲಾಸ್ ಮಾತ್’ ಈಗಾಗಲೇ ಕರಾವಳಿ ಜಿಲ್ಲೆಯ ಹಲವು ಭಾಗಗಳಲ್ಲಿ ಪತ್ತೆಯಾಗಿತ್ತು.

ಇದೀಗ ಇದೇ ಮೊದಲ ಬಾರಿಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಅತಿಥಿಯಾಗಿ ವಲಸೆ ಬಂದಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಕೇರಳದ ವೈನಾಡು ಅರಣ್ಯ ತಮಿಳುನಾಡಿನ ಸತ್ಯಮಂಗಲಂ ಅರಣ್ಯ ಮತ್ತು ರಾಜ್ಯದ ಕಾವೇರಿ, ಮಹದೇಶ್ವರ ಬೆಟ್ಟ ಹಾಗೂ ಪಶ್ಚಿಮ ಘಟ್ಟಗಳಿಗೆ ಕೊಂಡಿಯಾಗಿದ್ದು, ಅಪಾರ ಜೀವ ವೈವಿಧ್ಯತೆ ಹೊಂದಿದೆ. ಹಾಗಾಗಿ ಪತಂಗಗಳು ಸಂತಾನೋತ್ಪತ್ತಿಗಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಬರುತ್ತವೆ. ಈ ವೇಳೆ ಚಿಟ್ಟೆ ಪಾರ್ಕ್ ಸಿಬ್ಬಂದಿ ಗುರುತಿಸಿ ಅಟ್ಲಾಸ್ ಪತಂಗವನ್ನು ರಕ್ಷಣೆ ಮಾಡಿದ್ದಾರೆ.

Edited By : Manjunath H D
PublicNext

PublicNext

02/12/2021 12:54 pm

Cinque Terre

60.18 K

Cinque Terre

0