ಬೆಂಗಳೂರು: ರಾತ್ರಿ ಸುರಿದ ಭಾರಿಗೆ ಮಳೆಗೆ ಯಲಹಂಕ ಕೆರೆಕೋಡಿ ಬಿದ್ದಿದೆ,ಯಲಹಂಕ ಕೆರೆಕೋಡಿ ಇಳಿಜಾರಿನಲ್ಲಿರುವ ಕೇಂದ್ರಿಯ ವಿಹಾರ ಅಪಾರ್ಟ್ಮೆಂಟ್ ಗೆ ನೀರು ನುಗ್ಗಿದ್ದು ,ಕೋಡಿ ನೀರು ಹರಿದು ಕೇಂದ್ರೀಯ ವಿಹಾರ ಪಾರ್ಕಿಂಗ್ ಸಂಪೂರ್ಣ ಜಲವೃತವಾಗಿದೆ.
ಅತಿಯಾದ ನೀರು ಬಂದಿರುವುದರಿಂದ ಕಾರು, ಬೈಕ್ ಗಳು ಕೂಡ ಮುಳುಗಡೆ ಆಗಿವೆ, ಬೇಸ್ಮೆಂಟ್ ನಲ್ಲಿ ಮೂರ್ನಾಲ್ಕು ಅಡಿ ನಿಂತಿರುವ ನೀರು ನಿವಾಸಿಗಳಿಗೆ ತಲೆ ನೋವಾಗಿದೆ,ಅತಿಯಾದ ಮಳೆನೀರು ಏಕಾಏಕಿ ರಾಜಕಾಲುವೆಯ ಹೊರಬಂದು ನೀರು ಹರಿದ ಹಿನ್ನಲೆ ಅವಾಂತರ ಸೃಷ್ಟಿಯಾಗಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ಕೊಟ್ಟಿದ್ದಾರೆ
PublicNext
19/11/2021 07:42 pm