ಹಿರಿಯೂರು : ತಾಲ್ಲೂಕಿನ ಯರಬಳ್ಳಿ ಗ್ರಾಮದ ಪೂಜಾರಿ ಮಾರಣ್ಣ ಹಾಗೂ ಪುರದಮ್ಮ ಅವರ ಮನೆಯ ಒಳಗಡೆ ಗೋಡೆ ಮೇಲೆ ಬೃಹತ್ ಗಾತ್ರದ ಹುತ್ತ ಬೆಳೆದಿದೆ. ಅಲ್ಲದೆ ಒಳಭಾಗದಲ್ಲಿ ಶುಕ್ರವಾರ ಮಧ್ಯರಾತ್ರಿ 12 ಗಂಟೆಯಿಂದಲೂ ಭೂಮಿಯಿಂದ ವಿಸ್ಮಯಕಾರಿಯಾಗಿ ನೀರು ಚಿಮ್ಮುತ್ತಿದ್ದು ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.
ಸುಮಾರು ವರ್ಷಗಳಿಂದ ಮನೆಯಲ್ಲಿ ಹುತ್ತ ಬೆಳೆದಿದೆ. ಉಡಸಲು ಮಾರಮ್ಮ ದೇವಿ ಎಂದು ಮನೆಯವರು ಹುತ್ತಕ್ಕೆ ಪ್ರತಿದಿನ ಪೂಜಿಸಿಕೊಂಡು ಬರುತ್ತಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಮನೆಯ ಒಳಭಾಗದಲ್ಲಿ ತಳಭಾಗದಿಂದ ನೀರು ಉಕ್ಕುತ್ತಿರವ ದೃಶ್ಯ ಆಶ್ಚರ್ಯ ಉಂಟುಮಾಡಿದೆ. ನೀರನ್ನು ಮನೆಯಿಂದ ಹೊರಗೆ ಚಲ್ಲಿದರೂ ಖಾಲಿಯಾಗುತ್ತಿಲ್ಲ ಎನ್ನುತ್ತಾರೆ ಕುಟುಂಬದ ಸದಸ್ಯರು. ಇನ್ನೂ ವಿಷಯ ತಿಳಿದ ಗ್ರಾಮಸ್ಥರು ತಂಡೋಪತಂಡವಾಗಿ ಬಂದು ನೋಡಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ
PublicNext
14/11/2021 05:11 pm