ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇರಳ ಪ್ರವಾಹಕ್ಕೆ ಜನ ತತ್ತರ, ಮನೆ ,ಅಂಗಡಿಗಳು ನೆಲಸಮ

ಕೇರಳ: ದೇವರ ನಾಡು ಕೇರಳದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಉದ್ಭವಿಸಿದ್ದು ಮಳೆ ಸಂಬಂಧಿ ದುರಂತಗಳಿಗೆ ಈಗಾಗಲೇ 18 ಮಂದಿ ಬಲಿಯಾಗಿದ್ದಾರೆ.20 ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ.ಮಧ್ಯ ಹಾಗೂ ದಕ್ಷಿಣ ಕೇರಳದಲ್ಲಿ ಭೀಕರ ಪ್ರವಾಹ ಹಾಗೂ ಭೂಕುಸಿತ ಘಟನೆಗಳು ವರದಿಯಾಗಿದೆ,ಪ್ರವಾಹ ತೀವ್ರಗೊಂಡ ಹಿನ್ನೆಲೆಯಲ್ಲಿ ಸೇನೆ ಹಾಗೂ ನೌಕಪಡೆಯ ನೆರವು ಕೋರಲಾಗಿದೆ.ಕೊಟ್ಟಾಯಂ ಜಿಲ್ಲೆಯ ಪ್ಲಾಪಲ್ಲಿ ಎಂಬಲ್ಲಿ ಭೀಕರ ಭೂಕುಸಿತ ಸಂಭವಿಸಿ ಮೂರು ಮನೆಗಳು ಹಾಗೂ ಒಂದು ಅಂಗಡಿ ನೆಲಸಮಗೊಂಡಿದೆ.ಘಟನೆ ನಡೆದ ಸ್ಥಳದಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಅ ಸ್ಥಳದಲ್ಲಿದ್ದರು ಎನ್ನಲಾಗಿದೆ. ಈ ಪ್ರದೇಶ ಇತರ ಕಡೆಯ ಸಂಪರ್ಕ ಕಡಿತಗೊಂಡಿದೆ.ಇದರಿಂದಾಗಿ ಪರಿಹಾರ ಹಾಗೂ ಶೋಧಕಾರ್ಯಚರಣೆಗೆ ಕಷ್ಟವಾಗಿದೆ‌.ಪರಿಸ್ಥಿತಿ ತೀವ್ರ ಕಳವಳಕಾರಿವಾಗಿದ್ದು ಸುಧಾರಿಸುವ ವಿಶ್ವಾಸವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವ್ಯಕ್ತಪಡಿಸಿದ್ದಾರೆ..

Edited By : Nagesh Gaonkar
PublicNext

PublicNext

17/10/2021 08:44 pm

Cinque Terre

43.4 K

Cinque Terre

0

ಸಂಬಂಧಿತ ಸುದ್ದಿ