ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ : ಚಿತ್ರದುರ್ಗದಲ್ಲಿ ಮೋಡ ಕವಿದ ವಾತಾವರಣ; ಕೆಲಕಾಲ ಧರೆಗಿಳಿದ ವರುಣ.

ಚಿತ್ರದುರ್ಗ : ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಇನ್ನೂ ಕರಾವಳಿ ಹಾಗೂ ಮಲೆನಾಡು ಭಾಗ ಸೇರಿದಂತೆ ವಿವಿಧ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಇತ್ತ ಚಿತ್ರದುರ್ಗ ಜಿಲ್ಲೆಯಲ್ಲಿ ತಡರಾತ್ರಿ ಹಾಗೂ ಬೆಳಿಗ್ಗೆಯಿಂದಲೇ ಮೊಡ ಕವಿದ ವಾತಾವರಣವಿದ್ದರಿಂದ ವಿವಿಧ ಭಾಗಗಳಲ್ಲಿ ಕೆಲಕಾಲ ವರುಣ ಧರೆಗಿಳಿದಿದ್ದಾನೆ. ಚಿತ್ರದುರ್ಗ ನಗರ ಸೇರಿದಂತೆ ಹಿರಿಯೂರು, ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ ಮೊಳಕಾಲ್ಮೂರು ಭಾಗದಲ್ಲಿ ಮಳೆಯಾಗುತ್ತಿದೆ.

ಚಿತ್ರದುರ್ಗ ನಗರದಲ್ಲಿ ತಡರಾತ್ರಿ ಬಿದ್ದ ಮಳೆಯಿಂದಾಗಿ ಜೋಗಿಮಟ್ಟಿ ರಸ್ತೆಯ ನಾಲ್ಕನೆ ಅಡ್ಡ ರಸ್ತೆಯಲ್ಲಿ ನೀರು ತುಂಬಿ ತುಳುಕುತ್ತಿತ್ತು. ಮೊಣಕಾಲ್ ಎತ್ತರಕ್ಕೆ ನೀರು ನಿಂತಿತ್ತು. ಮಹಿಳೆಯರು ನೀರನ್ನು ಚರಂಡಿಗೆ ಕಡೆಗೆ ಹೋಗುವ ಪ್ರಯತ್ನವನ್ನು ಮಾಡುತ್ತಿರುವುದು ಕಂಡುಬಂತು. ಕಳೆದ ನಾಲ್ಕು ವರ್ಷಗಳಿಂದ ಶಾಸಕರು, ಜಿಲ್ಲಾಧಿಕಾರಿಗಳು, ನಗರಸಭೆ ಹಾಗೂ ಸಂಬಂಧಿಸಿದವರಿಗೆಲ್ಲಾ ಅರ್ಜಿ ಕೊಟ್ಟು ಅಲೆದಾಡಿ ದುರಸ್ಥಿ ಮಾಡಿಕೊಡಿ ನೀರು ಮನೆಗೂ ನುಗ್ಗತ್ತವೆ ಎಂದು ಬೇಡಿಕೊಂಡರೂ ಕೂಡ ಯಾರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ಯುವಕ ಅವಿನಾಶ್ ಅಸಮಾಧಾನ ವ್ಯಕ್ತಪಡಿಸಿದನು. ಕೂಡಲೇ ಸರಿಪಡಿಸದೇ ಹೋದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದು, ಮುಂದಿನ 24 ಗಂಟೆಯಲ್ಲಿ ಮಳೆಯಾಗುವ ಸಂಭವವಿದೆ

Edited By : Shivu K
PublicNext

PublicNext

06/10/2021 02:22 pm

Cinque Terre

60.72 K

Cinque Terre

0