ದಾವಣಗೆರೆ: ಗಣೇಶನ ಮೂರ್ತಿಗೆ ನಾಗರ ಹಾವೊಂದು ಸುತ್ತಿಕೊಂಡ ಘಟನೆ ದಾವಣಗೆರೆ ತಾಲೂಕಿನ ಕೈದಾಳೆ ಗ್ರಾಮದಲ್ಲಿ ನಡೆದಿದೆ.
ಕೈದಾಳೆ ಗ್ರಾಮದ ಮೇಗಳಹಟ್ಟಿಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಈ ವೇಳೆ ಮುಂಜಾನೆಯಿಂದ ಭಕ್ತರು ಬಂದು ಪೂಜೆ ಸಲ್ಲಿಸಿ ತಮ್ಮ ಭಕ್ತಿಯನ್ನ ಸಮರ್ಪಿಸುತ್ತಿದ್ದರು.
ಇನ್ನೂ ಈ ಸಂದರ್ಭದಲ್ಲಿ ಬಂದಂತ ನಾಗರಹಾವೊಂದು ಪ್ರತಿಷ್ಠಾಪನೆ ಮಾಡಿದ್ದ ಗಣೇಶನನ್ನ ಸುತ್ತುವರೆದು ನಂತರ, ವಿಘ್ನೇಶ್ವರನ ಕೊರಳಿಗೆ ಸುತ್ತಿಕೊಂಡು ಎಡೆ ಎತ್ತಿದೆ. ಇದರಿಂದ ನೆರೆದಿದ್ದ ಜನರು ಹಾಗೂ ಭಕ್ತರು ಒಮ್ಮೆಲೆ ಆಶ್ಚರ್ಯಚಕಿತರಾದರೆ, ಇನ್ನೂ ಕೆಲವರು ದೇವರ ಮಹಿಮೆ ಎಂದು ಪೂಜೆ ಸಲ್ಲಿಸಿದ್ದಾರೆ.
ಗಣಪತಿಯ ಕೊರಳಲ್ಲಿ ನಾಗರಹಾವು ಸುತ್ತಿಕೊಂಡಿರುವುದನ್ನ ನೋಡಲು ಜನರು ತಂಡೋಪತಂಡವಾಗಿ ಬಂದು ಕುತೂಹಲದಿಂದ ವೀಕ್ಷಣೆ ಮಾಡಿದರು. ಹೀಗೆ ಸುಮಾರು ಒಂದು ಗಂಟೆಗಳ ಕಾಲ ಹಾವು ಗಣಪತಿಯ ಮೇಲೆ ಇದ್ದು ನಂತರ ಅಲ್ಲಿಂದ ಹೊರ ಹೋಗಿದೆ. ಈ ದೃಶ್ಯವನ್ನ ಕಣ್ಮುಂಬಿಕೊಳ್ಳಲು ಕೆಲವರು ಮೊಬೈಲ್ ನಲ್ಲಿ ನಾಗರಹಾವನ್ನ ಸೆರೆ ಹಿಡಿದಿದ್ದಾರೆ.
PublicNext
12/09/2021 03:40 pm