ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪರೂಪದ ಹಾಕ್ಸ್ ಬಿಲ್ ಕಡಲಾಮೆ ಕಳೇಬರ ಪತ್ತೆ

ಕಾರವಾರ: ಇಲ್ಲಿನ ಪಶ್ಚಿಮ ಕರಾವಳಿ ತೀರದಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಅಪರೂಪ ಎನ್ನಬಹುದಾದ ಹಾಕ್ಸ್ ಬಿಲ್ ಕಡಲಾಮೆಯ ಕಳೇಬರ ಪತ್ತೆಯಾಗಿದೆ. ಕಡಲಾಮೆಗಳಲ್ಲಿ ಉಳಿದ ಪ್ರಬೇಧಗಳಿಗಿಂತ ಚಿಕ್ಕ ಪ್ರಬೇಧ ಎನಿಸಿಕೊಂಡಿರುವ ಹಾಕ್ಸ್ ಬಿಲ್ ಕಡಲಾಮೆ ಇದಾಗಿದೆ. ಸ್ಥಳೀಯ ಭಾಷೆಯಲ್ಲಿ ಇದನ್ನು "ಗಿಡುಗ ಆಮೆ" ಎಂದೂ ಕರೆಯಲಾಗುತ್ತದೆ.

ಕಾರವಾರದ ತಿಳುಮಾತಿ ಬೀಚ್ ಬಳಿ ಅದರ ಕಳೆಬರವನ್ನು ಕಡಲಜೀವಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಪಂಚಮಿಯವರು ಪತ್ತೆ ಮಾಡಿದ್ದಾರೆ. ಇದರ ಮುಖವು ಗಿಡಗನ ಮುಖದಂತೆ ಹೋಲುತ್ತದೆ. ದೇಹದ ಮೇಲೆ ಹುಲಿಯ ದೇಹದಂತೆ ಪಟ್ಟಿಗಳಿದ್ದು, ಕಾಲುಗಳಲ್ಲಿ ಎರಡು ಉಗುರುಗಳಿವೆ. ನೋಡಲು ತುಂಬಾ ಸುಂದರವಾಗಿ ಕಾಣುವ ಈ ಆಮೆ ಹೆಚ್ಚಾಗಿ ಪೆಸಿಫಿಕ್ ಮತ್ತು ಅಟ್ಲಾಂಟಿಕ್ ಸಾಗರಗಳಲ್ಲಿ ಹಾಗೂ ಅಂಡಮಾನ್, ನಿಕೋಬಾರ್‌ನ ಆಳವಿಲ್ಲದ ಕಡಲಲ್ಲಿ, ಹವಳದ ದಿಬ್ಬಗಳ ನಡುವೆ ಕಂಡು ಬರುತ್ತದೆ.

Edited By : Nagaraj Tulugeri
PublicNext

PublicNext

31/08/2021 12:42 pm

Cinque Terre

39.75 K

Cinque Terre

0