ಮಡಿಕೇರಿ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ ಇದರಿಂದ ರೈತರಿಗೆ ಭಾರೀ ತೊಂದರೆ ಕೂಡಾ ಉಂಟಾಗಿದೆ. ಇತ್ತ ಮಡಿಕೇರಿಯಲ್ಲಿ ಶುಕ್ರವಾರ ಜೋರು ಗಾಳಿ ಸಮೇತ ಆಲಿಕಲ್ಲು ಮಳೆಯಾಗಿದ್ದು, ಮಳೆಗೆ ಬೆಳೆ ನೆಲ ಕಚ್ಚಿವೆ.ಶನಿವಾರ ಸಂತೆ ಹೋಬಳಿ ವ್ಯಾಪ್ತಿಯ ಮುಳ್ಳೂರು, ನಿಡ್ತ, ಅಂಕನಹಳ್ಳಿ, ಗುಡುಗಳಲೆಯಲ್ಲಿ ರಾಶಿ ರಾಶಿ ಆಲಿಕಲ್ಲು ಸುರಿದಿರುವ ದೈಶ್ಯಗಳು ಸಾಮಾನ್ಯವಾಗಿದೆ.
ಕಾಫಿ ತೋಟ, ರಸ್ತೆ, ಮನೆಯ ಚಾವಣಿ, ತೆಂಗಿನ ತೋಟ, ಅಡಿಕೆ ತೋಟ ಹಾಗೂ ಬಾಳೆ ತೋಟಗಳಲ್ಲಿ ಅಪಾರ ಪ್ರಮಾಣ ಆಲಿಕಲ್ಲು ಸುರಿದಿದೆ. ಆಲಿಕಲ್ಲು ಮಳೆಯಾಗುತ್ತಿರುವುದು ರೈತರ ಆತಂಕವನ್ನು ಹೆಚ್ಚಿಸಿದೆ. ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಇನ್ನೂ ಎರಡೂ ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ತಿಳಿಸಲಾಗಿದೆ.
PublicNext
19/02/2021 07:29 pm