ಮೈಸೂರು: ಮಾಂಸಹಾರ ಪ್ರಾಣಿಗಳು ಸದಾ ಸಕ್ರಿಯವಾಗಿರುತ್ತವೆ, ಆದರೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿರುವ ಮಾಂಸಹಾರಿ ಪ್ರಾಣಿಗಳು ತಮ್ಮ ಬದಲಾದ ಆಹಾರ ಕ್ರಮದಿಂದಾಗಿ ಸೋಮಾರಿಗಳಾಗುತ್ತಿವೆ.
ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿದ ಕರ್ನಾಟಕ ಮೃಗಾಲಯ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಎಲ್ಲಾ ಮೃಗಾಲಯಗಳಲ್ಲಿ ಜನವರಿ ತಿಂಗಳಿಂದ ಕೋಳಿ ಮಾಂಸ ನೀಡಲಾಗುತ್ತಿದೆ.
ಕರ್ನಾಟಕವು ದೇಶದಲ್ಲಿ ಅತಿ ಹೆಚ್ಚು ಪ್ರಾಣಿಸಂಗ್ರಹಾಲಯಗಳನ್ನು ಹೊಂದಿದೆ ಮತ್ತು ಮೈಸೂರು ಮೃಗಾಲಯವು ಮಾಂಸಾಹಾರಿಗಳನ್ನು ಹೊಂದಿದೆ, ಇದರಲ್ಲಿ ಚಿರತೆಗಳು, ಬಿಳಿ ಹುಲಿಗಳು, ಜಾಗ್ವಾರ್ ಗಳು ಮತ್ತು ಒಂದು ಡಜನ್ ಗೂ ಹೆಚ್ಚು ಬಂಗಾಳ ಹುಲಿಗಳು, ಎರಡು ಡಜನ್ ಚಿರತೆಗಳು ಮತ್ತು ತೋಳಗಳು ಮತ್ತು ನರಿಗಳು ಇಲ್ಲಿವೆ.
PublicNext
18/02/2021 08:28 pm