ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಡಾನೆಗೆ ಪ್ರಸಾದ ತಿನಿಸಿದ ಐಎಎಸ್ ಅಧಿಕಾರಿ: ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವೇನು?

ಚಾಮರಾಜನಗರ: 3 ವರ್ಷಗಳ ನಂತರ ಇಲ್ಲಿನ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನದ ಪ್ರಾಂಗಣಕ್ಕೆ ಗಜರಾಜ ಬಂದಿದ್ದು, ಈ ವೇಳೆ ಆನೆಗೆ ಪ್ರಸಾದ ತಿನ್ನಿಸಿದ ಐಎಎಸ್ ಅಧಿಕಾರಿಯೊಬ್ಬರು ಟೀಕೆಗೆ ಗುರಿಯಾಗಿದ್ದಾರೆ.

ದೇವಸ್ಥಾನದ ಸಿಬ್ಬಂದಿ ನೀಡುತ್ತಿದ್ದ ಪ್ರಸಾದದ ಆಸೆಗೆ ಬರುತ್ತಿದ್ದ ಕಾಡಾನೆ ಕಳೆದ ಮೂರು ವರ್ಷಗಳಿಂದ ಬಂದಿರಲಿಲ್ಲ. ಆದರೆ, ಅಚ್ಚರಿ ಎಂಬಂತೆ ನಿನ್ನೆ ಚಾಮರಾಜನಗರ ಜಿಲ್ಲೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಆನೆ ಬಂದಿದೆ.

ಇದೇ ಸಂದರ್ಭದಲ್ಲಿ ಐಎಎಸ್ ಅಧಿಕಾರಿ ಬಿ.ಬಿ.ಕಾವೇರಿ, ಪೌರಾಡಳಿತ ಇಲಾಖೆ ನಿರ್ದೇಶಕಿ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರೂ ಕೂಡ ದೇವಾಲಯಕ್ಕೆ ಭೇಟಿ ಕೊಟ್ಟಿದ್ದರು. ಕಾಡಾನೆ ಬಂದಿದ್ದನ್ನು ಗಮನಿಸಿದ ಕಾವೇರಿಯವರು ಕಾಡಾನೆಗೆ ದೇವಸ್ಥಾನದ ಪ್ರಸಾದ ಸಿಹಿಪೊಂಗಲ್ ಮತ್ತು ಬೆಲ್ಲ ತಿನಿಸಿದ್ದಾರೆ. ಈ ಮೂಲಕ ಕಾವೇರಿ ಅವರು ವನ್ಯಜೀವಿ ಕಾಯ್ದೆಗಳ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲ ಇದು ಪರಿಸರವಾದಿಗಳ ವಿರೋಧಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪರಿಸರವಾದಿಗಳು ಕಾವೇರಿ ಅವರ ಕ್ರಮವನ್ನು ಖಂಡಿಸಿದ್ದಾರೆ. ಪ್ರಸಾದದ ಆಮಿಷಕ್ಕೆ ಒಳಗಾಗಾಗಿ ಕಾಡಾನೆ ಮತ್ತೆ ಮತ್ತೆ ಬರಬಹುದು. ಇದು ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗಬಹುದು. ಐಎಎಸ್ ಅಧಿಕಾರಿ ಬಿ.ಬಿ ಕಾವೇರಿ ಅವರು ವಿವೇಕದಿಂದ ವರ್ತಿಸಬೇಕಿತ್ತು ಎಂಬುದು ಪರಿಸರವಾದಿಗಳ ವಾದವಾಗಿದೆ.

Edited By : Nagaraj Tulugeri
PublicNext

PublicNext

16/01/2021 08:22 am

Cinque Terre

85.06 K

Cinque Terre

11

ಸಂಬಂಧಿತ ಸುದ್ದಿ