ಮನುಷ್ಯರಿಗಷ್ಟೇ ಅಲ್ಲ ಕಣ್ರೀ.. ಪ್ರಾಣಿಗಳಿಗೂ ಭಾವನೆಗಳು ಇರುತ್ತವೆ. ಅವು ನಮಗಿಂತಲೂ ಸೂಕ್ಷ್ಮ ಸಂವೇದಿಯಾಗಿರುತ್ತವೆ. ಅದರಲ್ಲೂ ದೇಶೀ ಹಸುಗಳು ಮನುಷ್ಯರೊಂದಿಗೆ ಸಹಜೀವನಕ್ಕೆ ಸ್ಪಂದಿಸುತ್ತವೆ.
ಅರೆ, ಇದೇನಿದು? ಹಸು ಮುಂದೆ ಮುಂದೆ ಮನುಷ್ಯರು ಹಿಂದೆ ಹಿಂದೆ ಯಾಕೆ ಹೋಗ್ತಿದ್ದಾರೆ? ಇದನ್ನೆಲ್ಲ ನೀವ್ಯಾಕೆ ನಮಗೆ ತೋರಿಸ್ತಿದ್ದೀರಿ ಅಂತ ನೀವು ಅಂದ್ಕೊಂಡಿರಬಹುದು. ವಿಷ್ಯ ಹೇಳಿ ಬಿಡ್ತೀವಿ ಕೇಳಿ.
ಹೀಗೆ ಮುಂದೆ ಹೆಜ್ಜೆ ಹಾಕುತ್ತಿರುವ ಈ ಹಸು ಕಾಡಿನಲ್ಲಿ ಮೇಯಲು ಹೋದಾಗ ಅಲ್ಲಿಯೇ ಹೆರಿಗೆ ಆಗಿದೆ. ಹಸುವಿಗೆ ಮುದ್ದಾದ ಕರು ಜನಿಸಿದೆ. ಕೂಡಲೇ ಅಲ್ಲಿಂದ ತನ್ನ ಮನೆಗೆ ಬಂದ ಬಾಣಂತಿ ಹಸು ತನ್ನನ್ನು ಸಾಕಿದವರನ್ನು ಕಾಡಿಗೆ ಕರೆದೊಯ್ದಿದೆ.
ಏನಿರಬಹುದೆಂದು ಕುತೂಹಲಕ್ಕೆ ಹಸುವನ್ನು ಹಿಂಬಾಲಿಸಿದ್ದಾರೆ. ತನ್ನ ಮಾಲೀಕರನ್ನ ಸೀದಾ ಕಾಡಿಗೆ ಕರೆದೊಯ್ದ ಹಸು ತಾನು ಕರು ಹಾಕಿದ ಜಾಗದವರೆಗೂ ಕರೆದೊಯ್ದಿದೆ. ಈ ವೇಳೆ ಹಿಂಬಾಲಿಸಿಕೊಂಡು ಬಂದಿದ್ದ ಮಾಲೀಕರ ಖುಷಿಗೆ ಪಾರವೇ ಇರಲಿಲ್ಲ.
ಈ ಸೋಜಿಗದ ಸಂಗತಿಯನ್ನ ಭಗವಾನ್ ಜೋಶಿ ಎಂಬುವವರು ಹ್ವಾಯ್ ನೀವು ಕುಂದಾಪ್ರದರಾ? ಎಂಬ ಫೇಸ್ ಬುಕ್ ಪೇಜಿನಲ್ಲಿ ಹಂಚಿಕೊಂಡಿದ್ದಾರೆ. ಇನ್ನೊಂದು ಆಸಕ್ತಿಕರ ವಿಚಾರ ಎಂದರೆ ಹೆರಿಗೆಯಾದ ನಂತರ ಈ ಹಸು ತನ್ನ ಕರುಳ ಕುಡಿಯೊಂದಿಗೆ ಒಂದು ರಾತ್ರಿಯನ್ನ ಕಾಡಿನಲ್ಲೇ ಕಳೆದಿದೆಯಂತೆ.
PublicNext
18/01/2021 07:30 pm