ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧರ್ಮಸ್ಥಳದಲ್ಲಿ ಅಪರೂಪದ 'ಸಾರಿಬಾಳ' ಹಾವು ಪತ್ತೆ

ಬೆಳ್ತಂಗಡಿ: ಪಶ್ಚಿಮ ಘಟ್ಟ ಹಾಗೂ ಅರಣ್ಯ ಪ್ರದೇಶದಲ್ಲಿ ಮಾತ್ರ ಕಂಡು ಬರುವ ವಿಷರಹಿತ 'ಸಾರಿಬಾಳ' ಹಾವು (Foresten cat Snake) ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ದಾಮೋದರ್ ಎಂಬುವರ ಮನೆಯಲ್ಲಿ ಬೆಳ್ತಂಗಡಿಯ ಸ್ನೇಕ್ ಅಶೋಕ್ ಲಾಯಿಲ ಅವರು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.

ಸಾರಿಬಾಳ ಅಳಿವಿನಂಚಿನಲ್ಲಿರುವ ವಿಷರಹಿತ ಹಾವು ,ಇದರ‌ ಸಂತತಿ ಕೂಡ ಕಡಿಮೆಯಾಗಿದೆ. ಸ್ನೇಕ್ ಅಶೋಕ್ ಅವರ 6 ವರ್ಷದ ಹಿಂದೆ ಲಾಯಿಲ ಗ್ರಾಮದ ಕಿಂಡಾಜೆ ಎಂಬಲ್ಲಿ ಸಾರಿಬಾಳ ಹಾವನ್ನು ಮೊದಲ ಬಾರಿ ಹಿಡಿದ್ದಿದ್ದರು. ಇದಾದ ಬಳಿಕ ಶುಕ್ರವಾರ ಧರ್ಮಸ್ಥಳದಲ್ಲಿ ಎರಡನೇ ಭಾರಿ ಸುಮಾರು 7 ಅಡಿ ಉದ್ದದ ಹಾವು ಪತ್ತೆಯಾಗಿದೆ.

Edited By : Somashekar
PublicNext

PublicNext

28/05/2022 01:58 pm

Cinque Terre

70.18 K

Cinque Terre

2

ಸಂಬಂಧಿತ ಸುದ್ದಿ