ಬೆಳಗಾವಿ: ಬೆಳಗಾವಿ ನಗರದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಧಾರಾಕಾರ ಮಳೆಗೆ ನಗರದಲ್ಲಿ ಮನೆಗಳು ಕುಸಿಯುತ್ತಿವೆ. ನಗರದಲ್ಲಿ ಬಿಡುವಿಲ್ಲದೇ ಸುರಿಯುತ್ತಿರುವ ಭಯಾನಕ ಮಳೆಗೆ ಶಹಾಪುರದ ಸಪಾರ್ ಗಲ್ಲಿಯಲ್ಲಿ ಎರಡು ಮನೆ ಕುಸಿದು ಬಿದ್ದಿವೆ. ಮನೆಯ ಕುಸಿತ ಸಂದರ್ಭದಲ್ಲಿ ವೃದ್ಧ ದಂಪತಿ ಪಾರದ ಘಟನೆ ನಡೆದಿದೆ.
ಹೌದು, ಬೆಳಗಾವಿಯ ಶಹಾಪೂರ ಪ್ರದೇಶದ ಸಫಾರಿ ಗಲ್ಲಿಯ ಶಂಕ್ರವ್ವಾ ಹಂಗರಕಿ, ಮಲ್ಲವ್ವಾ ಕುಮಶೆಟ್ಟಿ ಎಂಬುವರ ಮನೆ ಕುಸಿದು ಅದೃಷ್ಟವಶಾತ್ ಅಜ್ಜ ಮತ್ತು ಅಜ್ಜಿ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮನೆ ಕುಸಿದು ಬೀಳುವ ಕ್ಷಣದಲ್ಲಿ ಅಜ್ಜ ನೀರು ತುಂಬಲು ಹೊರ ಬಂದಿದ್ದ, ವೃದ್ದೆ ಶಂಕ್ರವ್ವಾಅಡುಗೆ ಮಾಡುತ್ತಿದ್ದಳು . ಮನೆ ಮೇಲ್ಛಾವಣಿ ಕುಸಿಯುತ್ತಿದ್ದಂತೆ ಓಡಿ ಹೊರಬಂದು ಅನಾಹುತದಿಂದ ಪಾರಾಗಿದ್ದಾರೆ. ಅಜ್ಜ ಬಸವರಾಜ್ ಅಜ್ಜಿ ಶಂಕ್ರವ್ವಾ ಇಬ್ಬರೂ ಸುರಕ್ಷಿತಾಗಿದ್ದಾರೆ. ಮನೆಯಲ್ಲಿದ್ದ ಆಹಾರ ಸಾಮಾಗ್ರಿಗಳು, ಪಾತ್ರೆ, ಬಟ್ಟೆ ಹಾಸಿಗೆ ಹಾನಿ. ಎಲ್ಲವನ್ನೂ ಕಳೆದುಕೊಂಡಿರುವ ಈ ವೃದ್ಧ ದಂಪತಿಯ ಬದುಕು ಬೀದಿಗೆ ಬಂದಂತಾಗಿದೆ.
PublicNext
07/08/2022 06:23 pm