ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಮಳೆಯ ಪರಿಣಾಮ ಅಪಾರ ಹಾನಿ ಸಂಭವಿಸಿದೆ. ಈ ಸಂಬಂಧ ಮಳೆ ಹಾನಿ ದುರಸ್ತಿಗೆ 1,171 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಬಿಬಿಎಂಪಿ ಸರ್ಕಾರವನ್ನು ಕೋರಿದೆ.
ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ರಸ್ತೆ ಮೂಲ ಸೌಕರ್ಯ ಅಂತಂದ್ರೆ ಗುಂಡಿ ಮುಚ್ಚಲು 100 ಕೋಟಿ, ರಾಜಕಾಲುವೆ ದುರಸ್ತಿ, ಹೂಳು ಎತ್ತಲು 411 ಕೋಟಿ, ವಲಯಗಳ ದುರಸ್ಥಿ ಕಾಮಗಾರಿ 600 ಕೋಟಿ, ಘನತಾಜ್ಯ ನಿರ್ವಹಣೆ 50 ಕೋಟಿ,ಮಳೆ ನಿಯಂತ್ರಣ ಕೊಠಡಿ ನಿರ್ಮಾಣ ಹಾಗೂ ಸಾಮಗ್ರಿ ಖರೀದಿಗೆ 10 ಕೋಟಿ ರೂ ಅಂದಾಜು ವೆಚ್ಚವನ್ನು ಪಾಲಿಕೆ ಪಟ್ಟಿ ಮಾಡಿದೆ.
ಪ್ರವಾಹ ಹಾನಿ ತಡೆಗೆ ತುರ್ತಾಗಿ 120 ಕಾಮಗಾರಿ ಕೈಗೊಳ್ಳಬೇಕಿದೆ ಎಂದು ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ.
PublicNext
03/12/2021 10:54 am