ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಘು ಭೂಕಂಪ ಪೀಡಿತ ಪ್ರದೇಶಗಳಿಗೆ ಇಂದು ತಜ್ಞರ ಭೇಟಿ, ಪರಿಶೀಲನೆ

ಬೆಂಗಳೂರು: ಕಳೆದ ವಾರಗಳಲ್ಲಿ ರಾಜ್ಯದ ವಿಜಯಪುರ, ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳ ಕೆಲವು ಗ್ರಾಮಗಳಲ್ಲಿ ಹಲವು ಬಾರಿ ಲಘು ಭೂಕಂಪನವಾಗಿತ್ತು. ಹೀಗಾಗಿ ಸ್ಥಳೀಯರು ಆತಂಕಗೊಂಡಿದ್ದರು. ಇಂದು ಸೋಮವಾರ ಭೂಕಂಪನವಾದ ಈ ಪ್ರದೇಶಗಳಿಗೆ ತಜ್ಞರು ಭೇಟಿ ನೀಡಲಿದ್ದಾರೆ.

ಅಧಿಕೃತ ಮೂಲಗಳ ಪ್ರಕಾರ, ತಜ್ಞರು ತಮ್ಮ ಸಂಶೋಧನೆಗಳನ್ನು ಹಂಚಿಕೊಳ್ಳಲು ಮಂಗಳವಾರ ಕಲಬುರಗಿಯಲ್ಲಿ ಚಿಂತನ ಮಂಥನದಲ್ಲಿ ಭಾಗವಹಿಸಲಿದ್ದಾರೆ. ನಂತರ ತಮ್ಮ ಸಂಶೋಧನೆಗಳ ಬಗ್ಗೆ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಲಬುರಗಿ, ಬೀದರ್ ಮತ್ತು ವಿಜಯಪುರ ಜಿಲ್ಲೆಗಳ ಭೂಕಂಪ ಪೀಡಿತ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಲು ತಜ್ಞರು ಎರಡು ತಂಡಗಳನ್ನು ರಚಿಸಿದ್ದು, ‘ಎ’ ತಂಡವು ಕಲಬುರಗಿ ಜಿಲ್ಲೆಯ ಚಿಂಚೋಳಿ ಮತ್ತು ಕಾಳಗಿ ತಾಲ್ಲೂಕಿನ ಗ್ರಾಮಗಳು ಮತ್ತು ಬೀದರ್ ಜಿಲ್ಲೆಯ ಗ್ರಾಮಕ್ಕೆ ಭೇಟಿ ನೀಡಲಿದೆ. ವಿಜಯಪುರ ಜಿಲ್ಲೆಯ ಕಂಪನ ಪೀಡಿತ ಗ್ರಾಮಗಳಿಗೆ ‘ಬಿ’ ತಂಡ ಭೇಟಿ ನೀಡಲಿದೆ.

Edited By : Nagaraj Tulugeri
PublicNext

PublicNext

08/11/2021 11:00 am

Cinque Terre

24.07 K

Cinque Terre

0