ಕೋಯಿಕ್ಕೋಡ್ : ಪ್ರಕೃತಿಯಲ್ಲಿ ನಡೆಯುವ ವಿಸ್ಮಯಗಳಿಗೆ ಎಲ್ಲರೂ ಬೆರಗಾಗಲೇ ಬೇಕು ಇದು ಅಚ್ಚರಿಯಾದ್ರು ಅದು ಸತ್ಯ.
ಒಂದೊಂದು ಕಾಲದಲ್ಲಿಯೂ ಪ್ರಕೃತಿಯದ್ದು ಒಂದೊಂದು ವಿಸ್ಮಯ. ಬಿರುಬಿಸಿಲಿನಲ್ಲಿಯೂ ಕೆಲವೊಂದು ಮರದಲ್ಲಿ ಹೂವು ನಳನಳಿಸಿದರೆ, ಮಳೆ, ಚಳಿಗಾಲದಲ್ಲಿ ಇನ್ನಾವುದೋ ಹೂವುಗಳು ಉದುರುವುದು ಚಿಗುರುವುದು ಹೀಗೆ ಮನುಷ್ಯನ ಊಹೆಗೂ ನಿಲುಕದ್ದ ವಿಚಿತ್ರಗಳು ಪ್ರಕೃತಿಯಲ್ಲಿ ಸಂಭವಿಸುತ್ತಲೇ ಇರುತ್ತವೆ.
ಅಂಥದ್ದೇ ಒಂದು ವಿಚಿತ್ರ ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಅವಲಪಂಡಿ ಎಂಬ ಹಳ್ಳಿಯೊಂದರಲ್ಲಿ ಸಂಭವಿಸಿದೆ.
ಚಳಿಗಾಲ ಶುರುವಾಯಿತೆಂದರೆ ಈ ಗ್ರಾಮ ಪೂರ್ತಿ ಗುಲಾಬಿ ಬಣ್ಣದಿಂದ ನಳನಳಿಸುತ್ತದೆ, ಸಂಪೂರ್ಣ ಗ್ರಾಮದ ಚಿತ್ರಣವೇ ಬದಲಾಗಿಬಿಡುತ್ತದೆ.
ಇಂಥದ್ದೊಂದು ವಿಸ್ಮಯ ಈಗಲೂ ನಡೆಯುತ್ತಿದೆ.
ಗ್ರಾಮದ ಬಣ್ಣ ಬದಲಾಗಲು ಕಾರಣ, ಇಡೀ ಗ್ರಾಮದ ತುಂಬ ಹರಡಿರುವ ಹೂ.
ಕಣ್ಣು ಹಾಯಿಸಿದಲ್ಲೆಲ್ಲಾ ಈ ಹೂವೀಗ ಅರಳಿ ನಿಂತು ಗ್ರಾಮದ ಚಿತ್ರಣವನ್ನೇ ಬದಲಿಸಿಬಿಟ್ಟಿದೆ.
ಹೆಚ್ಚಾಗಿ ನೀರಿನಿಂದ ಕೂಡಿರುವ ಈ ಗ್ರಾಮದಲ್ಲಿ ನೀರಿನ ಮೇಲೆ ಬೆಳೆಯುವ ಕಾಬೊಂಬಾ ಫರ್ಕಾಟಾ ಎಂಬ ಜಾತಿಗೆ ಸೇರಿದ ಮುಲ್ಲನ್ ಪಾಯಲ್ ಸಸ್ಯರಾಶಿಯಿಂದಾಗಿ ಇಡೀ ಗ್ರಾಮವೇ ಗುಲಾಬಿ ಬಣ್ಣದಿಂದ ಕಂಗೊಳಿಸುತ್ತಿದೆ.
ಈ ಹೂವುಗಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಕಾರಣ, ಇಂಥದ್ದೊಂದು ವಿಶೇಷ ಗ್ರಾಮ ಇರುವುದು ಜನರಿಗೆ ತಿಳಿಯುತ್ತಿದೆ.
ಈ ಗ್ರಾಮವನ್ನು ನೋಡಲು ಜನ ಉತ್ಸುಕರಾಗಿದ್ದಾರೆ.
ಗ್ರಾಮಸ್ಥರು ಈ ಹೂವುಗಳನ್ನು ಮಾರಿ ಚಳಿಗಾಲದ ಸಮಯದಲ್ಲಿ ಆದಾಯ ಗಳಿಸುತ್ತಿದ್ದಾರೆ.
PublicNext
24/11/2020 03:26 pm