ನಮ್ಮ ಕೈಯಾಗ ಒಂದ್ ಕಲ್ಲ ಸಿಕ್ರ ಸಾಕ... ಏನ್ ಮಾಡಬಹುದು ಯೋಚನೆ ಮಾಡಿ... ನಮ್ಮ ತಲ್ಯಾಗ ಬರೋದ ಮೊದ್ಲ ಕೆಟ್ಟ ಯೋಚನೆ ಅಲ್ವಾ...? ಇನ್ನೋಬ್ಬರು ಕಟ್ಟಿದ್ದನ್ನು ಕೆಡುವುದು, ಹಾಳ ಮಾಡೋದು ಅಂದ್ರೆ ನಮಗೆ ಸಮಾಧಾನ. ಅಷ್ಟ ಯಾಕ ಅರಣ್ಯ ಪ್ರದೇಶ ಹಾಳ ಮಾಡಿ, ಪ್ರಾಣಿಗಳ ಸ್ವಾತಂತ್ರ್ಯ ಕಿತ್ತುಕೊಂಡ ಬಂಡ ಬಾಳೆ ಮಾಡಕುಂತೇವಿ....
ಆದ್ರೆ ಆನೆಯೊಂದು ಮಾನವ ನಿರ್ಮಿಸಿದ ಪುಟ್ಟ ಸೇತುವೆಗೆ ಹಾನಿ ಮಾಡದೆ ಅತ್ತಿಂದ ಇತ್ತ ದಾಟುತ್ತದೆ... ಈ ವಿಡಿಯೋವನ್ನು ಸಿಮೋನ್ ಬಿಆರ್‌ಎಫ್‌ಸಿ ಹಾಪ್ಕಿನ್ಸ್ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ. ಜೊತೆಗೆ 'ಈ ವಿಡಿಯೋ ನಿಮಗೆ ಏನು ತೋರಿಸುತ್ತದೆ ಎಂದು ನೀವು ಯೋಚಿಸಬಹುದು? ಪ್ರಾಣಿ ಮಾನವ ಸೃಷ್ಟಿಯನ್ನು ಹೇಗೆ ರಕ್ಷಿಸುತ್ತದೆ ಎಂಬುದನ್ನು ನೋಡಿ. ನಾವು ಕೂಡ ಪ್ರಾಣಿಗಳ ಜಗತ್ತನ್ನು ಏಕೆ ರಕ್ಷಿಸಬಾರದು' ಎಂದು ಬರೆಯಲಾಗಿದೆ. ಈ ವಿಡಿಯೋಗೆ ಅನೇಕ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ, ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
PublicNext
10/11/2020 12:19 pm