ತುಮಕೂರು: ರೈತ ದಿನಾಚರಣೆ ಯಲ್ಲಿ ಬೆದರಿದ ಎತ್ತುಗಳು ಪಾವಗಡ ಶಾಸಕ ವೆಂಕಟರಮಣಪ್ಪರಿಗೆ ತಿವಿಯಲು ಮುಂದಾಗಿರುವಂತಹ ಘಟನೆ ಪಾವಗಡ ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ನಡೆದಿದೆ.
ಅದೃಷ್ಟವಶಾತ್ ಸ್ವಲ್ಪದರಲ್ಲೇ ಶಾಸಕರು ಪಾರಾಗಿದ್ದಾರೆ.ಆಗಿದ್ದೇನಂದರೆ ಪ್ರಶಸ್ತಿ ಸ್ವೀಕರಿಸಲು ೫ ಲಕ್ಷ ಮೌಲ್ಯದ ಎತ್ತುಗಳ ಜೊತೆ ಪ್ರಗತಿಪರ ರೈತ ಬಾಪೂಜಿ ಎತ್ತಿನ ಬಂಡಿಯಲ್ಲಿ ಬಂದಿದ್ದ, ಈ ಸಂದರ್ಭ ಶಾಸಕರು ಸೇರಿ ಇತರರು ಎತ್ತಿನ ಬಂಡಿ ಜೊತೆ ಫೋಟೋ ತೆಗೆದುಕೊಳ್ಳಲು ಹೋದಾಗ ಬೆದರಿದ ಎತ್ತು ಒಮ್ಮೆಲೆ ಹಾರಿ ನುಗ್ಗಿ ತಿವಿಯಲು ಮುಂದಾಗಿದೆ ನಂತರ
ಶಾಸಕರನ್ನು ಗನ್ ಮ್ಯಾನ್ ಕುಮಾರ್ ರಕ್ಷಣೆ ಮಾಡಿದ್ದಾರೆ. ಎತ್ತಿನ ಕೋಪಕ್ಕೆ ಪ್ರದರ್ಶನ ಮಳಿಗೆಗಳಿಗೆ ಹಾನಿಯಾಗಿದ್ದು,
ಶಾಮಿಯಾನಗಳೆಲ್ಲಾ ಕಿತ್ತುಹೋಗಿದೆ.
PublicNext
29/12/2021 12:19 pm