ಹಾವೇರಿ : ಗುಡುಗು ಸಹಿತ ಬಾರಿ ಮಳೆಯಾದ ಹಿನ್ನಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿಸಿಕೊಂಡು ಮನೆಯಿಂದ ಜಮೀನಿಗೆ ಹೋದ ವಿದ್ಯಾರ್ಥಿಯೋರ್ವ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಚಂದಾಪುರ ಗ್ರಾಮದಲ್ಲಿ ಘಟನೆ.
ಮಾಲತೇಶ್ ಜಟ್ಟೆಪ್ಪನವರ 15 ಮೃತ ಬಾಲಕ ಜಮೀನಿನಲ್ಲಿ ಇರಿಸಲಾಗಿದ್ದ ಧನಗಳ ಮೇವಿಗೆ ತಾಡಪತ್ರೆ ಹಾಕಲು ತೆರಳಿದ್ದ ವೇಳೆ ಎತ್ತಿಗೆ ಬಡಿದ ಸಿಡಿಲು ಬಳಿಕ ಬಾಲಕನ ಎದೆಗೆ ಬಡಿದಿದೆ. ಇನ್ನು ಎತ್ತಿನ ಕಾಲಿಗೆ ಗಂಭೀರ ಗಾಯವಾಗಿದೆ.ಸ್ಥಳಕ್ಕೆ ಶಿಗ್ಗಾವಿ ತಹಶೀಲ್ದಾರ ಭೇಟಿ ಪರಿಶೀಲನೆ ನಡೆಸಿದ್ದು, ಶಿಗ್ಗಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.
PublicNext
07/04/2022 10:18 pm