ತಮಿಳುನಾಡು: ಭೋರ್ಗರೆವ ಜಲಪಾತದಲ್ಲಿ ಸಿಲುಕಿದ್ದ ತಾಯಿ, ಮಗುವಿನ ರಕ್ಷಣೆಗೆ ಹೋದ ಯುವಕರು ನೀರಿಗೆ ಬಿದ್ದು ಪ್ರವಾಹಕ್ಕೆ ಕೊಚ್ಚಿ ಹೋಗಿ ಈಜಿ ದಡ ಸೇರಿದ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯ ಅತ್ತೂರು ಬೆಟ್ಟದಲ್ಲಿ ನಡೆದಿದೆ.
ಕೊರೊನಾದಿಂದ ನಿರ್ಬಂಧ ಹೇರಲಾಗಿದ್ದ ಕಲ್ವರ್ಯನ್ ಬೆಟ್ಟದ ಶ್ರೇಣಿಯಲ್ಲಿರುವ ಅನೈವಾರಿ ಜಲಪಾತ ದೋಣಿ ವಿಹಾರವು ಮೊನ್ನೆಯಿಂದ ಆರಂಭವಾಗಿದೆ. ಹೀಗಾಗಿ ನೂರಾರು ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ಜಲಪಾತದ ಬಳಿ ಮಹಿಳೆಯೊಬ್ಬರು ಪುಟ್ಟ ಮಗುವನ್ನು ಹಿಡಿದುಕೊಂಡು ಜಲಪಾತದ ಸೌಂದರ್ಯ ಸವಿಯುತ್ತ ಕೂತಿದ್ದರು. ಆದರೆ ಮಳೆಯ ಆರ್ಭಟದಿಂದ ಜಲಪಾತದ ಪ್ರವಾಹವು ಏಕಾಏಕಿ ಹೆಚ್ಚಾಗಿದೆ. ಪರಿಣಾಮ ತಾಯಿ- ಮಗು ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದರು. ಈ ವೇಳೆ ಅಲ್ಲಿದ್ದ ಇಬ್ಬರು ಯುವಕರು ಅವರನ್ನು ರಕ್ಷಣೆ ಮಾಡಲು ಧಾವಿಸಿದ್ದಾರೆ.
ನೀರಿನ ತೀವ್ರ ರಭಸದ ನಡುವೆ ಮೊದಲು ಮಗುವನ್ನ ರಕ್ಷಿಸಿದ ಯುವಕರು ಆಮೇಲೆ ತಾಯಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಇನ್ನೇನು ತಾವು ದಡ ಸೇರುವಾಗ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ. ತಕ್ಷಣವೇ ಮತ್ತೊಂದು ಯುವಕರ ತಂಡ ಅವರ ರಕ್ಷಣೆಗೆ ಪ್ರಯತ್ನಿಸಿ ವಿಫಲವಾಯ್ತು. ಸ್ವಲ್ಪ ಹೊತ್ತಿನಲ್ಲಿ ಯುವಕರು ಪವಾಡವೆಂಬಂತೆ ಈಜಿಕೊಂಡು ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ.
PublicNext
28/10/2021 10:24 pm