ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಗರಡಿ ಮನೆ ನಿರ್ಮಾಣಕ್ಕೆ 10ಲಕ್ಷ ಅನುದಾನ, ಪೈಲ್ವಾನರಿಗೆ ಪ್ರೋತ್ಸಾಹ:ಸಚಿವ ಡಾ.ನಾರಾಯಣಗೌಡ

ಮೈಸೂರು: ನಾಡಹಬ್ಬ ದಸರಾ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿರುವ ನಾಡ ಕುಸ್ತಿ ಪಂದ್ಯಾವಳಿಗಳಿಗೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಅವರು ಚಾಲನೆ ನೀಡಿದರು.

ನಾಡಹಬ್ಬ ದಸರಾದ ಪ್ರಯುಕ್ತ ಹಲವು ಕಾರ್ಯಕ್ರಮಗಳು, ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಅದರಲ್ಲಿ ಕುಸ್ತಿಯೂ ವಿಶೇಷವಾದದ್ದು. ನಮ್ಮ ರಾಜ-ಮಹಾರಾಜರು ಹಿಂದಿನಿಂದಲೂ ನಾಡ ಕುಸ್ತಿಗೆ ವಿಶೇಷ ಪ್ರಾಧ್ಯಾನತೆ ನೀಡಿ, ಪ್ರೋತ್ಸಾಹಿಸಿ ಬೆಳೆಸಿದ್ದರು. ಜಿಮ್‌ಗಳ ಅಬ್ಬರ ಹೆಚ್ಚಾಗಿದ್ದರೂ ಗರಡಿ ಮನೆಗಳಿಗೆ ವಿಶೇಷ ಮಾನ್ಯತೆ ಇದ್ದೇ ಇದೆ. ಮೈಸೂರು ವಿಭಾಗ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಹಲವು ಗರಡಿ ಮನೆಗಳಲ್ಲಿ ಕುಸ್ತಿಪಟುಗಳನ್ನು ತಯಾರಿ ಮಾಡಿ, ಪಂದ್ಯಾವಳಿಗಳಿಗೆ ಕಳುಹಿಸುತ್ತಿದ್ದಾರೆ. ನಮ್ಮ ಸರ್ಕಾರ ಕೂಡ ಕುಸ್ತಿಪಟುಗಳಿಗೆ ವಿಶೇಷ ಪ್ರೋತ್ಸಾಹ ನೀಡುತ್ತಿದೆ. ಗರಡಿ ಮನೆಗಳ ನಿರ್ಮಾಣಕ್ಕೆ ನಮ್ಮ ಕ್ರೀಡಾ ಇಲಾಖೆಯಿಂದ 10 ಲಕ್ಷ ಅನುದಾನ ನೀಡುತ್ತಿದ್ದೇವೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.

ಶಾಸಕ ನಾಗೇಂದ್ರ, ಜಿಲ್ಲಾಧಿಕಾರಿ ಬಗಾದಿ ಗೌತಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Edited By : Nagaraj Tulugeri
PublicNext

PublicNext

26/09/2022 08:42 pm

Cinque Terre

17.48 K

Cinque Terre

0

ಸಂಬಂಧಿತ ಸುದ್ದಿ