ಕನ್ನಡನಾಡನ್ನು ಎಲ್ಲಾ ರಂಗದಲ್ಲಿಯೂ ಸರ್ವ ಶ್ರೇಷ್ಠವಾಗಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಅಗ್ರ ಪೂಜೆಯೊಂದಿಗೆ 2022ರ ದಸರಾ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರೊಂದಿಗೆ ಪಾಲ್ಗೊಂಡು ಮಾತನಾಡಿದರು.
ಸರ್ವರಿಗೂ ಲೇಸನ್ನು ಬಯಸುವ ಕಲ್ಯಾಣದ ಚಿಂತನೆ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ರಂಗಗಳಲ್ಲಿ ಕಟ್ಟುವ ಕೆಲಸ ಮಾಡಬೇಕಿದೆ. ನಮ್ಮಲ್ಲಿರುವ ಬಡ ಜನರ ಬದುಕನ್ನು ಎತ್ತರಕ್ಕೆ ಕೊಂಡೊಯ್ಯಬೇಕಿದೆ. ಸರ್ವರಿಗೂ ಲೇಸನ್ನು ಬಯಸುವ ಕಲ್ಯಾಣದ ಚಿಂತನೆಯ ಅವಶ್ಯಕತೆ ಇದೆ. ಅಂಥ ಸದ್ಭುದ್ಧಿ ನೀಡಿ, ಕನ್ನಡನಾಡನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಿ ಎಂದರು.
ಚಾಮುಂಡಿ ಬೆಟ್ಟದಲ್ಲಿ ಸ್ಥಾಪನೆಯಾಗಿರುವ ತಾಯಿಯ ಶಕ್ತಿ ಪೀಠ ಇಡೀ ನಾಡಿಗೆ ಶಕ್ತಿ ನೀಡುತ್ತಿದೆ. ಅದರ ಫಲವಾಗಿ ಮೈಸೂರು ಮಹಾರಾಜರ ಕಾಲದಿಂದ ಈ ದೇವಿಯ ಪೂಜೆಯನ್ನು ಪ್ರಜಾಪ್ರಭುತ್ವ ಬಂದ ನಂತರವೂ ಮುಂದುವರೆಸಲಾಗುತ್ತಿರುವುದು ಒಂದು ವೈಶಿಷ್ಟ್ಯ ಎಂದರು.
ದುಷ್ಟರ ಸಂಹಾರ, ಶಿಷ್ಟರ ಪರಿಪಾಲನೆ ಮೊದಲಿನಿಂದಲೂ ಬಂದಿದೆ. ಆದರೆ ನಮ್ಮೊಳಗಿನ ಅವಗುಣಗಳ ನಿಗ್ರಹವನ್ನು ಆತ್ಮಸಾಕ್ಷಿಯಾಗಿ ನಾವೇ ಮಾಡಿಕೊಳ್ಳುವುದು ಹಾಗೂ ನಮ್ಮ ಆತ್ಮಶುದ್ದೀಕರಣ ಮಾಡುವ, ದುಷ್ಟ ವಿಚಾರಗಳನ್ನು ದೂರವಿಡುವ, ಉತ್ತಮ ವಿಚಾರಗಳಿಗೆ ಪುರಸ್ಕಾರ ನೀಡಿ ಬದುಕಿನಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡುವ ಪವಿತ್ರ ದಿನ ಎಂದರು.
PublicNext
26/09/2022 04:16 pm