ಎಚ್.ಡಿ.ಕೋಟೆ ಪಟ್ಟಣದ ತಾಲ್ಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಯುವ ಮುಖಂಡ ಜಯಪ್ರಕಾಶ್ ಕ್ಷಮೆ ಯಾಚಿಸಿದ್ದಾರೆ.
ಎಸ್ಟಿಗಳಿಗೆ ಮೀಸಲಾತಿ ಏರಿಕೆ ಹಿನ್ನಲೆಯಲ್ಲಿ ನಡೆದ ಎಸ್ಟಿ ಸಮುದಾಯದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರಿಗೆ ಅಪಮಾನ ಆರೋಪದಲ್ಲಿ ಸಮಾಜದ ಮುಖಂಡ ಜಯಪ್ರಕಾಶ್ ಸುದ್ದಿಗೋಷ್ಠಿ ನಡೆಸಿ ಕ್ಷಮೆ ಯಾಚಿಸಿದರು.
ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಳಕ್ಕೆ ಹೋರಾಟ ನಡೆಸಿದ ಸ್ವಾಮೀಜಿಗಳ ಫೋಟೋಗಳನ್ನು ಮೊದಲ ಸಾಲಿನಲ್ಲಿರಿಸಿ, ಆ ಬಳಿಕ ಡಾ. ಬಿ.ಆರ್ .ಅಂಬೇಡ್ಕರ್ ರವರ ಭಾವಚಿತ್ರವನ್ನು ಎರಡನೇ ಸಾಲಿನಲ್ಲಿ ಇರಿಸಲಾಗಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆ ಕುರಿತು ಅಂಬೇಡ್ಕರ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ವಿರೋಧದ ಬಳಿಕ ಎಚ್ಚೆತ್ತುಕೊಂಡ ಜಯಪ್ರಕಾಶ್, ಇದು ಆಕಸ್ಮಿಕವಾಗಿ ಕಣ್ತಪ್ಪಿನಿಂದ ನಡೆದಿರುವ ಘಟನೆ ಎಂದು ಪತ್ರಿಕಾಗೋಷ್ಠಿ ನಡೆಸಿ ಕ್ಷಮೆ ಯಾಚಿಸಿ, ಪ್ರಕರಣವನ್ನು ಇಲ್ಲಿಗೇ ಕೈ ಬಿಡುವಂತೆ ಮನವಿ ಮಾಡಿಕೊಂಡರು.
PublicNext
11/10/2022 08:21 pm