ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ

ಮೈಸೂರು : ಮೈಸೂರು ಅಕ್ರಮ ಜಿಂಕೆ ಮಾಂಸ ಸಾಗಣೆ ಪ್ರಕರಣದ ವಿಚಾರಣೆ ವೇಳೆ ಆನುಮಾನಸ್ಪದವಾಗಿ ಆರೋಪಿ ಸಾವನ್ನಪ್ಪಿರುವ ಘಟನೆ ತೀವ್ರ ಸ್ವರೂಪ ಪಡೆದು ಕೊಂಡಿದ್ದು ಹೊಸಹಳ್ಳಿ ಹಾಡಿಯ ಗ್ರಾಮಸ್ಥರು ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ತೀವ್ರವಾಗಿ ಪ್ರತಿರೋದಿಸಿದ್ದಾರೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವನ ಗುಂಡ್ರೆ ಅರಣ್ಯ ವ್ಯಾಪ್ತಿಯ ಹೊಸಹಳ್ಳಿ ಹಾಡಿಯಲ್ಲಿ ಅಕ್ರಮವಾಗಿ ಜಿಂಕೆ ಭೇಟೆಯಾಡಿ ಮಾಂಸ ಸಾಗಣೆ ಆರೋಪದಡಿಯಲ್ಲಿ ಕರಿಯಪ್ಪ ಎಂಬ ವ್ಯಕ್ತಿಯನ್ನು 3ದಿನದ ಹಿಂದೆ ಬಂಧಿಸಲಾಗಿದ್ದು ವಿಚಾರಣೆ ನೆಪದಲ್ಲಿ ಗುಂಡ್ರೆ ಅರಣ್ಯ ವಲಯದ ಕಚೇರಿಗೆ ಕರೆದೊಯ್ದಿದ್ದರು.

ಅರಣ್ಯ ಇಲಾಖೆ ವಶದಲ್ಲಿದ್ದ ಕರಿಯಪ್ಪ ಕಳೆದ ರಾತ್ರಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಇದು ಅರಣ್ಯ ಇಲಾಖೆ ಅಧಿಕಾರಿಗಳು ನೀಡಿರುವ ಹಿಂಸೆ ಮತ್ತು ಹಲ್ಲೆಯಿಂದ ಕರಿಯಪ್ಪ ಮೃತಪಟ್ಟಿದ್ದಾರೆಂದು ಆರೋಪಿಸಿ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.

ಇನ್ನು ಮುತ್ತಿಗೆ ವಿಚಾರ ಮೊದಲೇ ಅರಿತಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳು ಕಚೇರಿಗೆ ಬೀಗ ಹಾಕಿ ಕಚೇರಿಯಿಂದ ಕಾಲ್ಕಿತ್ತಿದ್ದಾರೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು ಅಂತರ ಸಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾಗಿದ್ದಾರೆ.

ಆದಿವಾಸಿಗರು ಮಾತ್ರ ತೀವ್ರ ಆಕ್ರೋಶ ಹೊರಹಾಕುತ್ತಿದ್ದು ಪ್ರಕರಣದ ತನಿಖೆಗೆ ಒತ್ತಾಯಿಸಿದ್ದಾರೆ.

Edited By : Somashekar
PublicNext

PublicNext

12/10/2022 02:15 pm

Cinque Terre

22.73 K

Cinque Terre

1

ಸಂಬಂಧಿತ ಸುದ್ದಿ