ಮೈಸೂರು: ಮೈಸೂರು ಗ್ರಾಮಾಂತರ ಸರ್ಕಾರಿ ಶಾಲೆಯ ಮಕ್ಕಳ ಬಿಸಿ ಊಟಕ್ಕೆ ಬಳಕೆ ಆಗಬೇಕಾದ ಅಕ್ಕಿ ಹಾಗೂ ಗ್ಯಾಸ್ಅನ್ನು ದಸರಾ ಕಾರ್ಯಕ್ರಮಕ್ಕೆ ಬಳಕೆ ಮಾಡಿಕೊಂಡು ಆ ಶಾಲೆಯ ಮಕ್ಕಳ ಊಟಕ್ಕೆ ಕತ್ತರಿ ಹಾಕುತ್ತಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸೋಸಲೆ ರಾಜಶೇಖರ ಮೂರ್ತಿ ಗಂಭೀರ ಆರೋಪ ಮಾಡಿದ್ದಾರೆ.
ಪಟ್ಟಣದ ಬಿಇಒ ಕಚೇರಿ ಬಳಿ ಇರುವ ಗುರುಭವನದಲ್ಲಿ ಮಕ್ಕಳ ದಸರಾ ಕಾರ್ಯಕ್ರಮವನ್ನು ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನಾದ್ಯಂತ ಇರುವ ಶಾಲಾ ಮಕ್ಕಳು ಭಾಗವಹಿಸುತ್ತಿದ್ದಾರೆ. ಆ ಮಕ್ಕಳ ಮಧ್ಯಾಹ್ನದ ತಿಂಡಿಗೆ ತಾಲ್ಲೂಕಿನ ಹಿರಿಯೂರು ಹಾಗೂ ಮಾದಾಪುರ ಸರ್ಕಾರಿ ಶಾಲೆಗಳಿಂದ ತಲಾ ಇಪ್ಪತ್ತು ಕೆ.ಜಿ.ಅಕ್ಕಿ ಹಾಗೂ ಗ್ಯಾಸ್‌ಅನ್ನು ಬಳಸಿಕೊಂಡು ಆ ಮಕ್ಕಳಿಗೆ ಶಿಕ್ಷಣ ಇಲಾಖೆ ಅನ್ಯಾಯವೆಸಗಿದೆ. ಈ ಸಂಬಂಧ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಬಿಇಒ ಅವರ ವಿರುದ್ಧ ನಮ್ಮ ಸಂಘಟನೆ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದರು.
PublicNext
24/09/2022 02:29 pm