ಮೈಸೂರು: ಜಿಲ್ಲೆಯ ಎಚ್.ಡಿ ಕೋಟೆಯಲ್ಲಿ ನಟ ಸಾಹಸಸಿಂಹ ವಿಷ್ಣುವರ್ಧನ್ ಹುಟ್ಟಹಬ್ಬದ ಅಂಗವಾಗಿ ವಿಷ್ಣುವರ್ಧನ್ ಅಭಿಮಾನಿ ಬಳಗದ ವತಿಯಿಂದ ಅನ್ನದಾನ ಏರ್ಪಡಿಸಲಾಗಿತ್ತು.
ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಜೆಡಿಎಸ್ ಮುಖಂಡ ಜೆ.ಪಿ.ಪ್ರಕಾಶ್ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮತಾನಾಡಿ, ವಿಷ್ಣುವರ್ಧನ್, ರಾಜ್ ಕುಮಾರ್, ಅಂಬರೀಷ್, ಪುನೀತ್ ಇವರು ಅಪ್ರತಿಮ ಕಲಾವಿದರು ಇವರು ದೈಹಿಕವಾಗಿ ಇಹಲೋಕ ತ್ಯಜಿಸಿದ್ದರೂ ಎಲ್ಲರ ಮನದಲ್ಲಿ ನೆಲೆಸಿರುವ ಈ ಕಲಾವಿದರ ಆದರ್ಶವನ್ನು ಎಲ್ಲರು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಹಾಗೂ ವಿಷ್ಣುವರ್ಧನ್ ಸ್ಮಾರಕವನ್ನು ಕೂಡಲೆ ಪೂರ್ಣಗೊಳಿಸಲು ಸರ್ಕಾರಕ್ಕೆ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ವಿ.ಎಸ್.ಎಸ್ ಆಭಿಮಾನಿ ಡಾ.ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ರಾಜೂಗೌಡ, ತಾಲೋಕು ಅಧ್ಯಕ್ಷ ಸಮಿ ಉಲ್ಲಾ, ಕನ್ನಡ ಪ್ರಮೋದ್, ವಿನಯ್, ರಾಕೇತ್ ಸೇರಿದಂತೆ ಅನೇಕರಿದ್ದರು.
PublicNext
06/10/2022 03:04 pm