ಮೈಸೂರು: ಅಪಘಾತದಲ್ಲಿ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ಮಿದುಳು ನಿಷ್ಕ್ರಿಯಗೊಂಡ ಹಿನ್ನೆಲೆ 27 ವರ್ಷದ ಮದನ್ ಎಂಬ ಯುವಕನ ಕುಟುಂಬಸ್ಥರು ಆತನ ಅಂಗಾಂಗ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.
ಮೈಸೂರಿನ ಮುನೇಶ್ವರ ನಗರದ ನಿವಾಸಿ ಮದನ್, ಕಾವೇರಿ ಆಸ್ಪತ್ರೆ ಬಳಿ ಬೈಕ್ ನಿಯಂತ್ರಣ ತಪ್ಪಿ ಅಪಘಾತದಲ್ಲಿ ಆಸ್ಪತ್ರೆ ಸೇರಿದ್ದ. ಅಪಘಾತದಲ್ಲಿ ಮದನ್ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿತ್ತು. ಮಿದುಳು ನಿಷ್ಕ್ರಿಯಗೊಂಡ ಕಾರಣ ಹೃದಯ ಸೇರಿ ಹಲವು ಅಂಗಾಂಗ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಮದನ್ ಹೃದಯ, ಶ್ವಾಸಕೋಶ, ಲಿವರ್, ಕಿಡ್ನಿ, ಕಾರ್ನಿಯಾ ಸೇರಿ ಹಲವು ಅಂಗಾಂಗ ದಾನ ಮಾಡಲಾಗಿದೆ. ಬರೋಬ್ಬರಿ 9 ಜನರ ಬಾಳಿಗೆ ಮದನ್ ಅಂಗಾಂಗಗಳನ್ನು ದಾನ ಮಾಡಲಾಗಿದೆ. ಜೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿಗೆ ಹೃದಯ ರವಾನೆ ಮಾಡಲಾಗಿದೆ.
PublicNext
08/10/2022 04:38 pm