ಮೈಸೂರು : ದಸರೆಗೆ ಕಾಡಿನಿಂದ ನಾಡಿಗೆ ಆಗಮಿಸಿರುವ ಲಕ್ಷ್ಮೀ ಎಂಬ ಆನೆ ಅರಮನೆ ಕೋಡಿ ಸೋಮೇಶ್ವರ ದೇಗುಲದ ಬಳಿ ಗಂಡು ಮರಿಗೆ ಜನ್ಮ ನೀಡಿದೆ.
ರಾಂಪುರ ಆನೆ ಶಿಬಿರದಲ್ಲಿ ಲಕ್ಷ್ಮೀ ಅರ್ಜುನ ಆನೆ ಜೊತೆ ಸೇರಿತ್ತು. ತಾಯಿ ಆನೆ ಲಕ್ಷ್ಮೀ ಮತ್ತು ಮರಿ ಆನೆ ಎರಡು ಆರೋಗ್ಯವಾಗಿವೆ. 15 ವರ್ಷದ ಹಿಂದೆ ದಸರೆಗೆ ಬಂದಿದ್ದ ಸರಳ ಸಹಾ ಅರಮನೆಯಲ್ಲೇ ಮರಿಗೆ ಜನ್ಮ ನೀಡಿತ್ತು. ಸರಳ ಜನ್ಮ ನೀಡಿದ ಮರಿಗೆ ಚಾಮುಂಡಿ ಎಂದು ಹೆಸರಿಡಲಾಗಿತ್ತು. ಲಕ್ಷ್ಮೀ ಹಾಗೂ ಮರಿ ಆನೆಗಳನ್ನು ಲಾಯದಿಂದ ಬೇರ್ಪಡಿಸಿದ ಅರಣ್ಯ ಇಲಾಖೆ ನಿರ್ಬಂಧಿತ ಪ್ರದೇಶದಲ್ಲಿ ಲಕ್ಷ್ಮೀ ಗೆ ಆರೈಕೆ ಮಾಡಲಾಗಿದೆ.
ಇನ್ನೂ ಫೋಟೋ, ವಿಡಿಯೋ ಚಿತ್ರೀಕರಣ ನಿಷೇಧ ಮಾಡಲಾಗಿದ್ದು, ಸರ್ವಜನಿಕರು ಸಹಕರಿಸುವಂತೆ ಡಿಸಿಎಫ್ ಕರಿಕಾಳನ್ ಮನವಿ ಮಾಡಿದ್ದಾರೆ.
Kshetra Samachara
14/09/2022 11:51 am