ಮೈಸೂರು: ದಸರಾ ಕವಿಗೋಷ್ಠಿ ಆಹ್ವಾನ ಪತ್ರಿಕೆಯಲ್ಲಿ ಮಹಾ ಎಡವಟ್ಟು ನಡೆದಿದೆ. ಈ ಪತ್ರಿಕೆಯಲ್ಲಿ ಮೃತ ವ್ಯಕ್ತಿ ಹೆಸರು ಇದೆ. ಅಷ್ಟೇ ಅಲ್ಲದೆ ಪ್ರತಾಪ್ ಸಿಂಹ ಅವರನ್ನು ಚಾಮರಾಜನಗರ ಸಂಸದ ಎಂದು ಮುದ್ರಿಸುವ ಮೂಲಕ ಆಯೋಜಕರು ಎಡವಟ್ಟು ಮಾಡಿದ್ದಾರೆ.
ದಸರಾ ಸಾಹಿತಿಗಳ ಆಹ್ವಾನ ಪತ್ರಿಕೆಯಲ್ಲಿ ದಿವಂಗತ ಸಾಹಿತಿ ರವೀಂದ್ರ ಕುಮಾರ್ ಹೆಸರು ಪ್ರಕಟ ಮಾಡಲಾಗಿದೆ. ಆಕಾಶವಾಣಿ ನಿಲಯ ನಿರ್ದೇಶಕರು ಹಾಗೂ ಸಾಹಿತಿಯಾಗಿದ್ದ ರವೀಂದ್ರ ಕುಮಾರ್ ಅವರು, 2019ರಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರ ಹೆಸರನ್ನು ಕವಿಗೋಷ್ಠಿ ಆಯೋಜಕರು ಮುದ್ರಿಸಿದ್ದಾರೆ. ಪ್ರಮಾದ ಅರಿವಾಗುತ್ತಿದ್ದಂತೆ ದಸರಾ ಸಮಿತಿ ಮರು ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಮರು ಮುದ್ರಣ ಪಟ್ಟಿಯಲ್ಲಿಯೂ ಪ್ರತಾಪ್ ಸಿಂಹ ಚಾಮರಾಜನಗರ ಸಂಸದ ಎಂದು ಮುದ್ರಣ ಮಾಡಲಾಗಿದೆ. ಸೋಮವಾರ ದಸರಾ ಸಾಹಿತಿಗಳ ಕವಿಗೋಷ್ಠಿ ನಡೆಯಲಿದ್ದು, ನಾಡಿನ ಹೆಸರಾಂತ ಕವಿಗಳು ಭಾಗಿಯಾಗಲಿದ್ದಾರೆ.
PublicNext
27/09/2022 12:05 pm