ಮೈಸೂರು : ದಸರಾ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದ್ದು ಜಂಬೂ ಸವಾರಿಯ ಗಜಪಡೆಗೆ ಚಿತ್ತಾರ ಬಿಡಿಸುವ ಕಾರ್ಯ ಆರಂಭವಾಗಿದೆ.
ಹುಣಸೂರು ಮೂಲದ ಶಿಕ್ಷಕ ನಾಗಲಿಂಗಸ್ವಾಮಿರಿಂದ ಚಿತ್ತಾರ ಬಿಡಿಸುವ ಕಾರ್ಯ ಆರಂಭವಾಗಿದ್ದು ಪ್ರತಿವರ್ಷವೂ ಶಿಕ್ಷಕ ನಾಗಲಿಂಗಸ್ವಾಮಿ ಮತ್ತು ತಂಡದವರು ದಸರಾದ ಎಲ್ಲಾ ಆನೆಗಳಿಗೂ ಚಿತ್ರ ಬಿಡಿಸುತ್ತಾರೆ.
ಆನೆಗಳ ಮೇಲೆ ಗಂಡುಬೇರುಂಡ, ಶಂಕಚಕ್ರ, ಕಿವಿಯ ಮೇಲೆ ಗಿಳಿ ಚಿತ್ರ, ಕಾಲು ಮತ್ತು ಬಾಲಕ್ಕೆ ಎಲೆ ಹೂ ಬಳ್ಳಿ ಚಿತ್ರ ಬಿಡಿಸಿ ದಸರಾ ಆನೆಗಳಿಗೆ ಮತ್ತಷ್ಟು ರಂಗು ತಂದುಕೊಡುತ್ತಾರೆ.
PublicNext
05/10/2022 10:21 am