ಮೈಸೂರು : ವಿಶ್ವ ವಿಖ್ಯಾತ ದಸರಾ ಮಹೋತ್ಸವ 2022 ಹಿನ್ನೆಲೆ ಅಂತಿಮ ಮೂರನೇ ಹಂತದ ಫಿರಂಗಿ ತಾಲೀಮು ನಡೆಸಲಾಯಿತು.
ಮೈಸೂರಿನ ವಸ್ತುಪ್ರದರ್ಶನ ಬಳಿ ನಗರ ಪೊಲೀಸ್ ಕಮಿಷನರ್, ಡಾ. ಚಂದ್ರಗುಪ್ತ ನೇತೃತ್ವದಲ್ಲಿ ಆನೆಗಳಿಗೆ ಹಾಗೂ ಕುದುರೆಗಳಿಗೆ ಭಾರಿ ಶಬ್ದದ ಪರಿಚಯಿಸುವ ಫಿರಂಗಿ
ತಾಲೀಮು ನಡೆಸಲಾಯಿತು.
೭ ಗಾಡಿಗಳ ಮೂಲಕ ೨೧ ಸುತ್ತುಗಳಲ್ಲಿ ಒಟ್ಟು ೨೧ ಕುಶಾಲತೋಪು ಸಿಡುವ ಪೂರ್ವಾಭ್ಯಾಸ ನಡೆಸಲಾಯಿತು. ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳು ಮತ್ತು ಕುದುರೆಗಳಿಗೆ ಫಿರಂಗಿ ಶಬ್ದ ಪರಿಚಯ ಬೆದರುವ ಲಕ್ಷಣಗಳಿರುವ ಆನೆಗಳ ಕಾಲುಗಳನ್ನ ಸರಪಣಿಯಿಂದ ಕಟ್ಟಿ ಮುಂಜಾಗ್ರತೆ ವಹಿಸಲಾಯಿತು.
PublicNext
24/09/2022 07:32 pm