ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ವಾಮಾಚಾರ ನಡೆಯುತ್ತಿದೆ. ಕೆಎಸ್‌ಒಯು ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದಲ್ಲಿ ಕೋಳಿ ತಲೆ, ಕಾಲನ್ನ ದುಷ್ಕರ್ಮಿಗಳು ಕತ್ತರಿಸಿ ಹಾಕಿದ್ದಾರೆ. ಜೊತೆಗೆ ಕುಂಕುಮ, ಕೂದಲು, ಬಳೆಚೂರು ಹಾಕಿ ವಿಕೃತಿ ಮೆರೆದಿದ್ದಾರೆ.
ಪತ್ರಿಕೋದ್ಯಮ ವಿಭಾಗದ ಹಿಂದೆಯಿದ್ದ ಕಛೇರಿಯಲ್ಲಿ ವಾಮಾಚಾರ ನಡೆದಿದೆ. ಎಚ್ ಓಡಿ ತೇಜಸ್ವಿ ನವಿಲೂರು ಸುಪರ್ದಿಯಲ್ಲಿ ಮುಖ್ಯಸ್ಥರ ಕೊಠಡಿ ಇತ್ತು. ಕಿಡಿಗೇಡಿಗಳು ಹಿಂದಿನ ದಿನ ಎಚ್ಓಡಿ ಫೋಟೋ ಹರಿದು, ವಾಮಾಚಾರ ಮಾಡಿಸಿದ್ದಾರೆ.
ವಾಮಾಚಾರಕ್ಕೆ ಒಳಗಾದ ಅಧ್ಯಾಪಕ ತೇಜಸ್ವಿ ಅವರಿಂದ ಪೊಲೀಸ್ ಠಾಣೆಗೆ ದೂರುದಾಖಲಾಗಿದೆ. ಕಳೆದ ಆರು ತಿಂಗಳ ಹಿಂದೆಯೇ ಕೊಠಡಿ ಕೀ ನೀಡಿರುವ ತೇಜಸ್ವಿ ಆರು ತಿಂಗಳ ಬಳಿಕ ಕೊಠಡಿಗೆ ಬಂದಾಗ ಈ ವಿಷಯ ಬೆಳಕಿಗೆ ಬಂದಿದೆ.
PublicNext
13/09/2022 01:41 pm