ಕಟೀಲು : ಕಬಡ್ಡಿ ಮತ್ತಿತರ ಕ್ರೀಡೆ, ಯಕ್ಷಗಾನ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕ್ರಿಯಾಶೀಲವಾಗಿದ್ದ ಶ್ರೀನಿಧಿ ಆಸ್ರಣ್ಣ ಸ್ಮರಣಾರ್ಥ ಶ್ರೀನಿಧಿ ಆಸ್ರಣ್ಣ ಆತ್ಮೀಯ ಬಳಗ ಹಾಗೂ ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಕಟೀಲು ಪದವೀಪೂರ್ವ ಕಾಲೇಜು ಆವರಣದಲ್ಲಿ ನಡೆಯುವ ಹೊನಲು ಬೆಳಕಿನ ಅಂತರ್ ಜಲ್ಲಾ ಮಟ್ಟದ ಹಾಗೂ ಬೆಲ್ಟ್ ಏರಿಯಾ ಆಹ್ವಾನಿತ ತಂಡಗಳ ಮ್ಯಾಟ್ ಕಬಡ್ಡಿ ಪಂದ್ಯಾಟ ಶನಿವಾರ ಉದ್ಘಾಟನೆಗೊಂಡಿತು.
ಈ ಸಂದರ್ಭ ನಡೆದ ಸಮಾರಂಭದಲ್ಲಿ ಖ್ಯಾತ ಕಬಡ್ಡಿ ಪಟು, ಏಕಲವ್ಯ ಪ್ರಶಸ್ತಿ ಪುರಸ್ಕೃತ ಉದಯ ಚೌಟ ಇವರಿಗೆ ಶ್ರೀನಿಧಿ ಆಸ್ರಣ್ಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಉದಯ ಚೌಟ ಮಾತನಾಡಿ, ರಾಷ್ಟ್ರೀಯ ಕ್ರೀಡೆ ಕಬಡ್ಡಿ ಕ್ರೀಡಾಳುಗಳನ್ನು ಪ್ರೋತ್ಸಾಹಿಸುವ ಕೆಲಸ ಅಗತ್ಯವಿದೆ. ಗ್ರಾಮೀಣ ಪ್ರದೇಶದಲ್ಲೂ ಬೆಂಬಲಿಸಬೇಕಾಗಿದೆ. ಶ್ರೀನಿಧಿ ಆಸ್ರಣ್ಣ ಉತ್ತಮ ಕ್ರೀಡಾಪಟುವಾಗಿದ್ದು, ಈ ನಿಟ್ಟಿನಲ್ಲಿ ಅನೇಕರನ್ನು ಸಂಘಟಿಸಿದ್ದರು. ಆತ್ಮಸ್ಥೈರ್ಯ, ಪ್ರಯತ್ನದಿಂದ ಸಾಧನೆ ಮಾಡಲು ಸಾಧ್ಯ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಟವಾಡಲು ಸಾಧ್ಯವಾದದ್ದು ಅನೇಕರ ಪ್ರೋತ್ಸಾಹದಿಂದ ಎಂದು ಹೇಳಿದರು.
ಶಾಸಕ ಉಮಾನಾಥ ಕೋಟ್ಯಾನ್, ಕಟೀಲು ದೇಗುಲದ ಆಡಳಿತ ಸಮಿತಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ, ಕೊಡೆತ್ತೂರುಗುತ್ತು ಬಿಪಿನ್‌ಚಂದ್ರ ಶೆಟ್ಟಿ, ಪಕ್ಷಿಕೆರೆ ಧನಂಜಯ ಶೆಟ್ಟಿಗಾರ್, ಎಕ್ಕಾರು ರತ್ನಾಕರ ಶೆಟ್ಟಿ, ದಯಾನಂದ ಮಾಡ, ಗಿರೀಶ್ ಶೆಟ್ಟಿ, ಕಸ್ತೂರಿ ಪಂಜ, ದೊಡ್ಡಯ್ಯ ಮೂಲ್ಯ, ಕಿರಣ್‌ಕುಮಾರ್ ಶೆಟ್ಟಿ, ಉದ್ಯಮಿ ಗಿರಿಧರ್ ಶೆಟ್ಟಿ, ಚರಣ್ ಶೆಟ್ಟಿ, ಆದರ್ಶ ಶೆಟ್ಟಿ, ಪ್ರಕಾಶ ಕುಕ್ಯಾನ್, ಲೋಕಯ್ಯ ಸಾಲ್ಯಾನ್, ಅಭಿಲಾಷ್ ಶೆಟ್ಟಿ, ಪ್ರದೀಪ್ ಶೆಟ್ಟಿ ಎಕ್ಕಾರು, ಶಾಂಭವಿ ಶೆಟ್ಟಿ ಮತ್ತಿತರರಿದ್ದರು.
ಈಶ್ವರ ಕಟೀಲ್ ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ನಿರೂಪಿಸಿದರು. ಗುರುರಾಜ್ ವಂದಿಸಿದರು. ಪಂದ್ಯಾಟದಲ್ಲಿ ಬೆಲ್ಟ್ ಏರಿಯಾದ 20 ತಂಡ ಹಾಗೂ ಜಿಲ್ಲಾ ಮಟ್ಟದ 14 ತಂಡಗಳು ಭಾಗವಹಿಸಿವೆ.
Kshetra Samachara
08/05/2022 10:17 pm