ಮುಲ್ಕಿ:ಗೋವಾ ದಲ್ಲಿ ನಡೆದ ರಾಜ್ಯ ಮಟ್ಟದ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ಸ್ಪರ್ದೆಯಲ್ಲಿ ಕಿನ್ನಿಗೋಳಿಯ ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಸದಸ್ಯರಾದ ವಿಜಯ ಕಾಂಚನ್ ಮೂರು ಚಿನ್ನದ ಪದಕ ಸಹಿತ ಬೆಸ್ಟ್ ಲಿಫ್ಟರ್ ಪ್ರಶಸ್ತಿ ಪಡೆದಿರುತ್ತಾರೆ.
ಅಕ್ಷತಾ ಪೂಜಾರಿ ಒಂದು ಚಿನ್ನ ಒಂದು ಬೆಳ್ಳಿ, ಮಂಜುನಾಥ್ ಮಲ್ಯ ಒಂದು ಚಿನ್ನ ಒಂದು ಬೆಳ್ಳಿ, ದಿಶಾ ಕುಕ್ಯಾನ್ ಎರಡು ಚಿನ್ನ, ಸಿಯಾ ಶೆಟ್ಟಿ ಒಂದು ಚಿನ್ನ ಒಂದು ಬೆಳ್ಳಿ ಪದಕ ಪಡದಿದ್ದಾರೆ. ಕಿನ್ನಿಗೋಳಿ ವೀರ ಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ರಾದ ಈಶ್ವರ್ ಕಟೀಲ್ ವಿಜೇತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
Kshetra Samachara
22/11/2021 06:05 pm