ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಫೇಮಸ್ ಯೂತ್ ಕ್ಲಬ್ ನ 33 ನೇ ವಾರ್ಷಿಕೋತ್ಸವದ ಅಂಗವಾಗಿ ಧ್ವಜಾರೋಹಣ ಮತ್ತು ಕ್ರೀಡಾಕೂಟದ ಉದ್ಘಾಟನೆ ಜರುಗಿತು.
ಧ್ವಜಾರೋಹಣವನ್ನು ಫೇಮಸ್ ಯೂತ್ ಕ್ಲಬ್ ಗೌರವಾಧ್ಯಕ್ಷ ಗುರುರಾಜ ಎಸ್ .ಪೂಜಾರಿ ನೆರವೇರಿಸಿದರು.
ಯಕ್ಷದೇಗುಲ ಹತ್ತು ಸಮಸ್ತರು, 10ನೇ ತೋಕೂರು ಅಧ್ಯಕ್ಷ ಸಂಜೀವ ಕರ್ಕೇರ ಅವರು ಬೆಲೂನುಗಳನ್ನು ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಫೇಮಸ್ ಯೂತ್ ಕ್ಲಬ್ ಅಧ್ಯಕ್ಷ ಭಾಸ್ಕರ್ ಅಮೀನ್ ಉಪಸ್ಥಿತರಿದ್ದರು. ಸಂಪತ್ ಶೆಟ್ಟಿ ನಿರೂಪಿಸಿದರು.
Kshetra Samachara
01/01/2021 07:48 am