ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀಕ್ಷೇತ್ರ ಪೆರಾರದ ನೂತನ ಬಂಟಕಂಬ ರಾಜಾಂಗಣದ ಪಾದುಕಾನ್ಯಾಸ ಕಾರ್ಯಕ್ರಮ

ಬಜಪೆ:ಶ್ರೀ ಕ್ಷೇತ್ರ ಪೆರಾರದ ಬಂಟಕಂಬ ರಾಜಾಂಗಣ ಮತ್ತು ವ್ಯಾಘ್ರ ಚಾಮುಂಡಿ ದೈವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ನೂತನ ಬಂಟಕಂಬ ರಾಜಾಂಗಣಕ್ಕೆ ಕದಳೀ ಶ್ರೀ ಯೋಗೇಶ್ವರ ಮಠದ ಶ್ರೀ ಶ್ರೀ ಶ್ರೀ ರಾಜಯೋಗಿ ನಿರ್ಮಲನಾಥಜೀ ಮಹಾರಾಜ್ ಅವರ ದಿವ್ಯ ಉಪಸ್ಥಿತಿಯಲ್ಲಿ,ಕುಡುಪು ಶ್ರೀ ಕೃಷ್ಣರಾಜ ತಂತ್ರಿಯವರ ಪೌರೋಹಿತ್ಯದಲ್ಲಿ ,ವಾಸ್ತ್ರು ಶಾಸ್ತ್ರಜ್ಙ ಶ್ರೀ ಬೆದ್ರಡ್ಕ ರಮೇಶ ಕಾರಂತರ ಮಾರ್ಗದರ್ಶನದಲ್ಲಿ ಪಾದುಕಾನ್ಯಾಸ ಕಾರ್ಯಕ್ರಮವು ಧಾರ್ಮಿಕ ವಿಧಿವಿಧಾನಗಳೊಂದಿಗೆ ಇಂದು ನಡೆಯಿತು.

ಈ ಸಂದರ್ಭ ಮಂಗಳೂರು ನಗರ ಉತ್ತರ ಶಾಸಕರೂ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರೂ ಆದ ಡಾ.ಭರತ್ ಶೆಟ್ಟಿ, ಮೂಲ್ಕಿ- ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ದೈವಸ್ಥಾನದ ಪೆರ್ಗಡೆಯವರಾದ ಎಂ.ಗಂಗಾಧರ ರೈ,ಮಧ್ಯಸ್ಥ ಬಿ.ಪ್ರತಾಪ್ ಚಂದ್ರ ಶೆಟ್ಟಿ,ಕಾರ್ಯಾಧ್ಯಕ್ಷ ಕೆ.ಶಿವಾಜಿ ಶೆಟ್ಟಿ,ಆಡಳಿತಾಧಿಕಾರಿ ಟಿ.ಸಾಯೀಶ್ ಚೌಟ,ಪಡುಪೆರಾರ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಮಿತಾ ಮೋಹನ್ ಶೆಟ್ಟಿ,ನರಸಿಂಹ ಪೆಜತ್ತಾಯ,ಸರ್ವ ಸದಸ್ಯರು,ಜಿರ್ಣೋದ್ದಾರ ಸಮಿತಿ ಮತ್ತು 16 ಗುತ್ತು ಮನೆತನದ ಪ್ರಮುಖರು,ಗಣ್ಯಾತೀಗಣ್ಯರು ಭಕ್ತರು ಉಪಸ್ಥಿತರಿದ್ದರು.ಸಮಿತಿಯ ಕಾರ್ಯದರ್ಶಿ ಸುರೇಶ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

13/06/2022 12:43 pm

Cinque Terre

1.78 K

Cinque Terre

0

ಸಂಬಂಧಿತ ಸುದ್ದಿ