ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೈಕಂಬ: ಉಳಿಪಾಡಿಯಲ್ಲಿ ನಡೆಯಲಿರುವ  'ರುದ್ರಾಕ್ಷ ವ್ಯಾಸ ಮಹಾಯಾಗ' ಆಮಂತ್ರಣ ಪತ್ರ ಬಿಡುಗಡೆ

ಬಜಪೆ:ಕೇರಳ ಪಾಲಕ್ಕಾಡ್ ಚಿತ್ತೂರಿನ ವ್ಯಾಸ ಪರಮಾತ್ಮ ಪೀಠಾಧಿಪತಿ ಸದ್ಗುರು  ಶ್ರೀ ವ್ಯಾಸನಂದ ಶಿವಯೋಗಿ ಗುರೂಜಿಯವರ ದಿವ್ಯ ಉಪಸ್ಥಿತಿಯಲ್ಲಿ , ಮಂಗಳೂರು ತಾಲೂಕಿನ ಗುರುಪುರ ಕೈಕಂಬ ಬಡಗ ಉಳಿಪಾಡಿಯ ವ್ಯಾಸ ಗುರುಕುಲ  ರುದ್ರಾಕ್ಷ ವ್ಯಾಸ ಮಹಾಯಾಗ ಸಮಿತಿಯ ನೇತೃತ್ವದಲ್ಲಿ ಏಪ್ರಿಲ್ 30 ಮತ್ತು ಮೇ 1ರಂದು ಮಂಗಳೂರು ತಾಲೂಕಿನ  ಗುರುಪುರ ಕೈಕಂಬ ಸಮೀಪದ  ಬಡಗ ಉಳಿಪಾಡಿಯಲ್ಲಿ ನಡೆಯಲಿರುವ  'ರುದ್ರಾಕ್ಷ ವ್ಯಾಸ ಮಹಾಯಾಗ' ದ ಆಮಂತ್ರಣ ಪತ್ರವನ್ನು ಶ್ರೀ ವ್ಯಾಸಾನಂದ ಶಿವಯೋಗಿ ಗುರೂಜಿಯವರು ಕೈಕಂಬ ಮಟ್ಟಿ ಬಡಗುಳಿಪಾಡಿ ವ್ಯಾಸ ಗುರುಕುಲದಲ್ಲಿ ಮಂಗಳವಾರ  ಬಿಡುಗಡೆ ಗೊಳಿಸಿದರು.

ಯಾಗ ನಡೆಯುವ ಜಾಗದ ಮಾಲೀಕರೂ, ಯಾಗ ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀಮತಿ  ಮಮತಾ ಎಸ್. ಕುಂದರ್, ಸಮಿತಿಯ ಅಧ್ಯಕ್ಷ ಶರಣ್ ರಾಜ್,  ಕಿರಣ್ ಪಕ್ಕಳ ಪೆರ್ಮಂಕಿ ಗುತ್ತು , ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಹರೀಶ್ ಮಟ್ಟಿ, ದಯಾನಂದ ಪೂಜಾರಿ, ಡಾ. ಎಲ್. ಕೆ. ಸುವರ್ಣ, ಕಮಲಾಕ್ಷ ಧನುಪೂಜೆ ಮೊದಲಾದವರು ಉಪಸ್ಥಿತರಿದ್ದರು.    

    

Edited By : PublicNext Desk
Kshetra Samachara

Kshetra Samachara

20/04/2022 02:55 pm

Cinque Terre

1.55 K

Cinque Terre

0

ಸಂಬಂಧಿತ ಸುದ್ದಿ