ಮುಲ್ಕಿ: ಅಧ್ಯಾತ್ಮ ಚಿಂತನೆಯೊಂದಿಗೆ ಬದುಕಿನ ಪಾಠ, ಮೌಲ್ಯಗಳನ್ನು ಕಲಿಸಿಕೊಟ್ಟ ದಾಸಶ್ರೇಷ್ಠರಾದ ಪುರಂದರ ದಾಸರ ಪದಗಳನ್ನು ಓದುವ, ಕೇಳುವ, ಹಾಡುವ ಮೂಲಕ ನಮ್ಮಲ್ಲಿ ಬದಲಾವಣೆ ತರಲು ಪ್ರಯತ್ನಿಸಬೇಕೆಂದು ಸಾಹಿತಿ, ನಿವೃತ್ತ ಶಿಕ್ಷಕಿ ಗಾಯತ್ರಿ ಎಸ್. ಉಡುಪ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಪುರಂದರದಾಸರ ಜಯಂತಿ ಅಂಗವಾಗಿ ನಡೆದ ಕಾರ್‍ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಪುರಂದರ ದಾಸರ ಪದಗಳು ಆ ಕಾಲಕ್ಕೂ ಈ ಕಾಲಕ್ಕೂ ನಮ್ಮನ್ನು ತಿಳಿದುಕೊಳ್ಳಲು, ತಿದ್ದಿಕೊಳ್ಳಲು ಪ್ರೇರಣೆ ನೀಡಬಲ್ಲ ಶ್ರೇಷ್ಠ ಸಾಹಿತ್ಯವಾಗಿದೆ ಎಂದು ಹೇಳಿದ ಅವರು, ಪುರಂದರ ದಾಸರ ಕೃತಿಗಳನ್ನು ಹಾಡಿದರು.
ಪ್ರಾಚಾರ್‍ಯ ಡಾ. ಕೃಷ್ಣ ಕಾಂಚನ್ ಸ್ವಾಗತಿಸಿದರು. ಶ್ರೇಯಾ ಮತ್ತು ಶ್ರೇಯಾ ಪ್ರಾರ್ಥಿಸಿದರು. ಉಪನ್ಯಾಸಕ ಸಂತೋಷ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.
Kshetra Samachara
25/02/2021 05:06 pm