ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಮಾಣಿ ಮಠದಲ್ಲಿ ವಿಷ್ಣುಗುಪ್ತ ವಿವಿ ಶಾಖೆ; ರಾಘವೇಶ್ವರ ಶ್ರೀ

ಬಂಟ್ವಾಳ: ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಶಾಖೆಯಾಗಿ ಮಾಣಿ ಮಠದ ಶ್ರೀರಾಮ ವೇದ ಪಾಠ ಶಾಲೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಘೋಷಿಸಿದರು.

ಮಾಣಿ ಮಠ ಸ್ಥಾಪನೆಯ ಮಂಡಲೋತ್ಸವ ಹಾಗೂ 48ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಕೃಷ್ಣ ಯಜುರ್ವೇದದ ಪರಿಪೂರ್ಣ ಬೋಧನೆಯ ಜತೆಗೆ ಆಧುನಿಕ ಶಿಕ್ಷಣ, ಭಾರತೀಯ ವಿದ್ಯೆ, ಕಲೆಗಳು ಮತ್ತು ವೇದಭ್ಯಾಸವನ್ನು ಇಲ್ಲಿ ಕಲಿಸಿ ಸಮಗ್ರ ಜೀವನ ಶಿಕ್ಷಣ ನೀಡುವ ಕೇಂದ್ರವಾಗಿ ಬೆಳೆಸಲಾಗುವುದು. ಮಠದ ಈ ಪ್ರಯತ್ನಕ್ಕೆ ಸಮಾಜದ ಸ್ಪಂದನೆ ವಿಶೇಷವಾಗಿ ಅಗತ್ಯ ಎಂದರು.

ಹವ್ಯಕ, ಹಾಲಕ್ಕಿ, ಮುಕ್ರಿ ಸಮಾಜದಂಥ ವಿಶಿಷ್ಟ ಸಂಸ್ಕೃತಿ ರೂಢಿಸಿಕೊಂಡಿರುವ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠ ವಿಶೇಷ ಯೋಜನೆ ಅನುಷ್ಠಾನಗೊಳಿಸಲಿದೆ ಎಂದು ಹೇಳಿದರು. ಕಳೆದ ಮೂರು ದಿನಗಳಿಂದ ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕೆ ಸಮಾಜದಿಂದ ದೊಡ್ಡ ಸಮರ್ಪಣೆಯಾಗಿದ್ದು, ಸಹಸ್ರಮಾನದ ಕಾರ್ಯಕ್ಕೆ ಸಮಾಜದಿಂದ ವ್ಯಕ್ತವಾಗುತ್ತಿರುವ ಸ್ಪಂದನೆ ಅನನ್ಯ ಎಂದರು.

ಮಂಡಲೋತ್ಸವ ಬಹಳ ಅರ್ಥಪೂರ್ಣವಾಗಿ ಮೂಡಿಬಂದಿದೆ. ಬಹಳಷ್ಟು ಶಿಷ್ಯರು ರಾಮ ನೈವೇದ್ಯಕ್ಕಾಗಿ ವಿಶೇಷವಾಗಿ ಭತ್ತ ಬೆಳೆಯುತ್ತಿದ್ದು, ಭತ್ತದ ಭಕ್ತಿ ಅನನ್ಯ ಎಂದು ಬಣ್ಣಿಸಿದರು. ಮಾಣಿ ಮಠದಲ್ಲಿ ಶ್ರೀರಾಮ ಪಾಠಶಾಲೆಯ ಉನ್ನತಿಗೆ

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ರಾಮ ನೈವೇದ್ಯಕ್ಕೆ ಮುಳ್ಳೇರಿಯಾ ಮಂಡಲದ ಪುಟ್ಟ ಮಕ್ಕಳು ಕೊರೊನಾ ಸಂದರ್ಭ ಬೆಳೆದ 550 ಕೆ.ಜಿ. ಸಾವಯವ ಅಕ್ಕಿಯನ್ನು ಶ್ರೀ ಸಂಸ್ಥಾನದವರಿಗೆ ಸಮರ್ಪಿಸಲಾಯಿತು. ಶ್ರೀಮಠದ ಆಡಳಿತ ಮಂಡಳಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ವರದಿ ವಾಚಿಸಿದರು. ಏಪ್ರಿಲ್ 16ರಿಂದ ನಾಲ್ಕು ದಿನ ಶ್ರೀಗಳ ಯೋಗಪಟ್ಟಾಭಿಷೇಕ ಮತ್ತು ಜೀವನ ದಾನ ಸಮಾರಂಭ ಮಾಣಿ ಮಠದಲ್ಲಿ ನಡೆಯಲಿದೆ ಎಂದು ವಿವರಿಸಿದರು.

ಪ್ಲವ ಸಂವತ್ಸರದ ಚಾತುರ್ಮಾಸ್ಯ ಮಾಣಿಮಠದಲ್ಲಿ ಕೈಗೊಳ್ಳುವಂತೆ ಸ್ವಾಮೀಜಿಯವರನ್ನು ಈ ಸಂದರ್ಭ ಸಮಸ್ತ ಶಿಷ್ಯಭಕ್ತರು ಕೋರಿದರು. ಘನಪಾಠಿಗಳಾದ ಶಂಕರನಾರಾಯಣ ಪಳ್ಳತ್ತಡ್ಕ ರಚಿಸಿದ 'ವೇದೋ ನಿತ್ಯಮಧೀಯತಾಮ್' ಕೃತಿಯನ್ನು ಸ್ವಾಮೀಜಿ ಈ ಸಂದರ್ಭ ಲೋಕಾರ್ಪಣೆ ಮಾಡಿದರು.

ಶ್ರೀಮಠದ ಎಲ್ಲ ಕಾರ್ಯಕ್ರಮಗಳಲ್ಲಿಯೂ ನಿರಂತರ ಕಲಾ ವೈವಿಧ್ಯತೆ ನಡೆಯಲಿವೆ. ರಜತ ಮಂಟಪವನ್ನು ಶ್ರೀರಾಮ ದೇವರಿಗೆ ಸಮರ್ಪಿಸಲಾಯಿತು. ಕಾರ್ಯಕರ್ತರ ಮಹಾಜಾಗೃತಿಯ ಪ್ರತೀಕವಾಗಿ ರುದ್ರಾಂಶ ಸಂಭೂತ ಶ್ರೀ ವೀರ ಹನುಮಂತನಿಗೆ 11 ಬಗೆಯ ವಿಶೇಷ ದ್ರವ್ಯಗಳಿಂದ ವಿಶೇಷ ಮಹಾರುದ್ರಾಭಿಷೇಕ ಸಲ್ಲಿಸಲಾಯಿತು.

Edited By : Nirmala Aralikatti
Kshetra Samachara

Kshetra Samachara

14/02/2021 10:57 am

Cinque Terre

2.29 K

Cinque Terre

0

ಸಂಬಂಧಿತ ಸುದ್ದಿ