ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡಬಿದಿರೆ: ಕೊರ್ಪುಸ್ ಕ್ರಿಸ್ಟಿ ಚರ್ಚ್ ಸುವರ್ಣ ಮಹೋತ್ಸವ ವರ್ಷಾಚರಣೆ ಉದ್ಘಾಟನೆ

ಮೂಡುಬಿದಿರೆ: ಇಲ್ಲಿನ ಕೊರ್ಪುಸ್ ಕ್ರಿಸ್ಟಿ ಚರ್ಚ್ ನ ಸುವರ್ಣ ಮಹೋತ್ಸವ ವರ್ಷವನ್ನು ಲೋಗೊ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಲಾಯಿತು.

ವಂದನೀಯ ಫಾ.ಪೌಲ್ ಸಿಕ್ವೇರಾ, ಚರ್ಚ್ ಫಾದರ್, ಹಾಗೂ ಫಾ. ಜೋಸೆಫ್ ಏಂಜೆಲೋ ಬಲಿ ಪೂಜೆ ನಡೆಸಿಕೊಟ್ಟರು.

ವಂದನೀಯ ಫಾ. ಪೌಲ್ ಸಿಕ್ವೇರಾ ಅವರು ಸಂದೇಶ ನೀಡಿ, "ತಾಯಿ ಮೇರಿ ಯೇಸುವಿನ ತಾಯಿ ಮತ್ತು ನಮ್ಮ ತಾಯಿ. ಹೊಸವರ್ಷ ಬಂದಾಗ ತಾಯಿ ಮೇರಿಯೊಡನೆ ಪ್ರಯಾಣ ಮಾಡುವ ಭಾಗ್ಯ ನಮ್ಮದಾಗಲಿ” ಎಂದರು.

ಲಾಂಛನವನ್ನು ತಯಾರಿಸಿದ ವಿನ್ಸೆಂಟ್ ಮಸ್ಕರೇನಸ್ ಅವರು, ಲಾಂಛನದ ಬಗ್ಗೆ ವಿವರಿಸಿ, ಸುವರ್ಣ ಮಹೋತ್ಸವವನ್ನು ಯಶಸ್ವಿಗೊಳಿಸಲು ಎಲ್ಲ ಸಮಿತಿಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡುವ ಅವಶ್ಯಕತೆ ಎಂದು ವಿವರಿಸಿದರು.

ಸುವರ್ಣ ಮಹೋತ್ಸವ ಸಮಿತಿಯ ಸಂಚಾಲಕ ಜೋನ್ ಮಿನೇಜಸ್, ಕಾರ್ಯದರ್ಶಿ ರೊನಾಲ್ಡ್ ಸೆರಾವೋ, ಸಮಿತಿಯ ಎಲ್ಲ ಸಂಚಾಲಕರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

01/01/2021 09:45 pm

Cinque Terre

4.31 K

Cinque Terre

0

ಸಂಬಂಧಿತ ಸುದ್ದಿ