ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ತಾಲೂಕು ಮುಸ್ಲಿಂ ಜಮಾತ್‍ ನೂತನ ಅಧ್ಯಕ್ಷರಾಗಿ ಕೆ.ಪಿ. ಮಹಮ್ಮದ್ ಹಾಜಿ ಆಯ್ಕೆ

ಪುತ್ತೂರು: ಪುತ್ತೂರು ತಾಲೂಕು ಮುಸ್ಲಿಂ ಜಮಾತ್‍ನ ನೂತನ ಅಧ್ಯಕ್ಷರಾಗಿ ಉದ್ಯಮಿ ಕೆ.ಪಿ. ಮಹಮ್ಮದ್ ಹಾಜಿ ಆಯ್ಕೆಯಾಗಿದ್ದಾರೆ. 

ಹಾಜಿ ಎಸ್. ಇಬ್ರಾಹಿಂ ಕಮ್ಮಾಡಿ ಅವರ ನಿಧನದ ಬಳಿಕ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಉಪಾಧ್ಯಕ್ಷರಾಗಿದ್ದ ಕೆ.ಪಿ. ಮಹಮ್ಮದ್ ಹಾಜಿ ಅವರನ್ನು ಕಮ್ಮಾಡಿ ಸಭಾಂಗಣದಲ್ಲಿ ನಡೆದ ಸಂಯುಕ್ತ ಜಮಾತ್ ಸಭೆಯಲ್ಲಿ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. 

ಸಭೆಯಲ್ಲಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಸಂಯುಕ್ತ ಜಮಾತ್‍ನ ಸಂಘಟನೆ ಕಾರ್ಯದರ್ಶಿ ಕೆ.ಎಂ. ಬಾವಾ ಹಾಜಿ, ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಕೋಶಾಧಿಕಾರಿ ಬಿ.ಎ. ಶಕೂರ್ ಹಾಜಿ, ಎಸ್.ಬಿ. ಮಹಮ್ಮದ್ ದಾರಿಮಿ, ಹುಸೈನ್ ದಾರಿಮಿ ರೆಂಜಲಾಡಿ. ದ.ಕ. ಜಿ.ಪಂ ಸದಸ್ಯ ಎಂ.ಎಸ್. ಮಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು. 

Edited By : Nagaraj Tulugeri
Kshetra Samachara

Kshetra Samachara

20/12/2020 09:42 am

Cinque Terre

2.54 K

Cinque Terre

0

ಸಂಬಂಧಿತ ಸುದ್ದಿ