ಕಟೀಲು:ಭಾರತೀಯ ಜನತಾ ಪಾರ್ಟಿ ಮುಲ್ಕಿ ಮೂಡಬಿದ್ರೆ ಮಂಡಲ ವತಿಯಿಂದ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಿರ್ಮಿಸಲಾದ ಮಹಾಕಾಲ್ ಕಾರಿಡಾರ್ ಇದರ ಲೋಕಾರ್ಪಣೆ ಕಾರ್ಯಕ್ರಮದ, ನೇರ ಪ್ರಸಾರ ವೀಕ್ಷಣೆ ಕಟೀಲು ಸರಸ್ವತೀ ಸದನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನುಕಟೀಲು ದೇವಳದ ಅರ್ಚಕ ಹರಿನಾರಾಯಣ ಆಸ್ರಣ್ಣ ನೆರವೇರಿಸಿದರು. ನಂತರ ಮಾತನಾಡಿದ ಅವರು ಮೋದಿಯವರು ಪ್ರಧಾನಿಯಾದ ನಂತರ ಅಭಿವೃದ್ದಿ ಜೊತೆ ಧಾರ್ಮಿಕ ಕ್ಷೇತ್ರಗಳು ಅತ್ತುತ್ತಮವಾಗಿ ಎದ್ದು ಕಾಣುತ್ತಿದೆ. ಕಾಶಿ ಕ್ಷೇತ್ರಕ್ಕೆ ಹೋದವರು, ಹಿಂದಿನ ಕಾಶಿ ಕ್ಷೇತ್ರಕ್ಕೂ ಇಂದಿನ ಕಾಶಿ ಕ್ಷೇತ್ರಕ್ಕೂ ಇರುವ ವ್ಯತ್ಯಸದ ಬಗ್ಗೆ ಅನುಭವ ಹಂಚಿಕೊಳ್ಳುತ್ತಾರೆ ಎಂದರು.
ಈ ಸಂದರ್ಭ ಜಿ. ಪಂ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಬಿಜೆಪಿ ಮಂಡಲಾಧ್ಯಕ್ಷ ಸುನೀಲ್ ಅಳ್ವ, ಕಾರ್ಯದರ್ಶಿ ಕೇಶವ ಕರ್ಕೇರ, ಶಕ್ತಿ ಕೇಂದ್ರದ ಅಧ್ಯಕ್ಷ ಜನಾರ್ದನ ಕಿಲೆಂಜೂರು, ಕಾರ್ಯದರ್ಶಿ ಅಭಿಲಾಷ್ ಶೆಟ್ಟಿ ಕಟೀಲು, ಒ.ಬಿ.ಸಿ ಅಧ್ಯಕ್ಷ ರಾಜೇಶ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
11/10/2022 07:01 pm