ಮುಲ್ಕಿ: ಕಟೀಲು ವಿಶ್ವ ಬ್ರಾಹ್ಮಣ ಕೂಡುವಳಿಕೆ ವತಿಯಿಂದ 9ನೇ ವರ್ಷದ ಭಗವಾನ್ ಶ್ರೀ ವಿಶ್ವಕರ್ಮ ಯಜ್ಞ ಹಾಗೂ ಪೂಜೆಯು ಪುರೋಹಿತ ಕಟೀಲು ಲೋಕೇಶ್ ಆಚಾರ್ಯ ನೇತೃತ್ವದಲ್ಲಿ ಶ್ರೀ ದುರ್ಗಾ ಗಣೇಶ್ ಸಭಾಭವನದಲ್ಲಿ ನಡೆಯಿತು.
ಮಧ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಸುಧಾಕರ್ ಆಚಾರ್ಯ, ಕೋಶಾಧಿಕಾರಿ ನಾರಾಯಣ ಆಚಾರ್ಯ, ಕಾರ್ಯದರ್ಶಿ ಗಣೇಶ್ ಆಚಾರ್ಯ, ಉಪಾಧ್ಯಕ್ಷ ಸದಾಶಿವಾಚಾರ್ಯ ಹೊಸಮನೆ ಕಟೀಲು, ಶಿವರಾಮ ಆಚಾರ್ಯ ಗುರು ರಾಘವೇಂದ್ರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
18/09/2022 10:37 pm