ಮುಲ್ಕಿ: ಫೇಮಸ್ ಯೂತ್ ಕ್ಲಬ್ (ರಿ) ಮತ್ತು ಮಹಿಳಾ ಮಂಡಲ 10ನೇ ತೋಕೂರು ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಪರಿಸರ ನೈರ್ಮಲ್ಯ ಮತ್ತು ಶ್ರಮದಾನವನ್ನು ತೋಕೂರು ಲೈಟ್ ಹೌಸ್ ಜಂಕ್ಷನ್ ನಿಂದ ಶ್ರೀ ಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲೆಯವರೆಗೆ ನಡೆಯಿತು.
ಫೇಮಸ್ ಯೂತ್ ಕ್ಲಬ್ ಅಧ್ಯಕ್ಷ ಭಾಸ್ಕರ್ ಅಮೀನ್ ತೋಕೂರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಪರಿಸರ ನೈರ್ಮಲ್ಯದ ಸಂಕಲ್ಪ ಪ್ರತಿಯೊಂದು ಮನ-ಮನೆಗಳಿಂದ ಬರುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಶ್ವ ಬ್ಯಾಂಕ್ ಕುಡಿಯುವ ನೀರು ಮತ್ತು ಪರಿಸರ ನೈರ್ಮಲ್ಯ ಸಮಿತಿಯ ಅಧ್ಯಕ್ಷ ದಿನಕರ ಸಾಲ್ಯಾನ್, ಯಕ್ಷ ದೇಗುಲ ಹತ್ತು ಸಮಸ್ತರು ಹತ್ತನೇ ತೂಕೂರು ಅಧ್ಯಕ್ಷ ಸುರೇಶ್ ಬಿ ದೇವಾಡಿಗ, ಫೇಮಸ್ ಯೂತ್ ಕ್ಲಬ್ ಉಪಾಧ್ಯಕ್ಷ ಭೋಜ ಕೋಟ್ಯಾನ್, ಕಾರ್ಯದರ್ಶಿ ಹಿಮಕರ ಕೋಟ್ಯಾನ್ ಕೋಶಾಧಿಕಾರಿ ನವೀನ್ ಚಂದ್ರ ಮತ್ತು ಸದಸ್ಯರು, ಮಹಿಳಾ ಮಂಡಲದ ಉಪಾಧ್ಯಕ್ಷೆ ಅಮಿತಾ ದಿನಕರ್ ಸಾಲ್ಯಾನ್, ಕಾರ್ಯದರ್ಶಿ ಕುಸುಮ ಹರೀಶ್ ಕೋಟ್ಯಾನ್, ಕೋಶಾಧಿಕಾರಿ ಇಂದಿರಾ ಸಂಜೀವ ಕರ್ಕೇರ ಮತ್ತು ಸದಸ್ಯರು ಉಪಸಿತರಿದ್ದರು. ಹಿಮಕರ್ ಕೋಟ್ಯಾನ್ ಸ್ವಾಗತಿಸಿ ಮಹಮ್ಮದ್ ಶರೀಫ್ ರವರು ಧನ್ಯವಾದವನ್ನು ಅರ್ಪಿಸಿದರು. ಸಂಪತ್ ಜೆ. ಶೆಟ್ಟಿಯವರು ನಿರೂಪಿಸಿದರು.
Kshetra Samachara
14/08/2022 09:58 pm