ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಾಷ್ಟ್ರ ಧ್ವಜ ಸ್ವಾಭಿಮಾನದ ಸಂಕೇತ :ಡಾ|| ಚೂಂತಾರು

ಮಂಗಳೂರು: ಆಜಾದೀ ಕೀ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರಕಾರ ಹಮ್ಮಿಕೊಂಡಿರುವ 'ಹರ್ ಘರ್ ತಿರಂಗಾ' ಅಭಿಯಾನ ಅತ್ಯಂತ ಔಚಿತ್ಯಪೂರ್ಣ ಕಾರ್ಯಕ್ರಮವಾಗಿದ್ದು, ದೇಶದ ಪ್ರತಿಯೊಬ್ಬ ನಾಗರೀಕರೂ ಈ ಅಭಿಯಾನದಲ್ಲಿ ಕೈ ಜೋಡಿಸಬೇಕು. ರಾಷ್ಟ್ರ ಧ್ವಜ ನಮ್ಮೆಲ್ಲರ ಸ್ವಾಭಿಮಾನದ ಸಂಕೇತ. ಈ ಅಭಿಯಾನ ನಮ್ಮೊಳಗೆ ಸುಪ್ತವಾಗಿರುವ ದೇಶ ಪ್ರೇಮ ಮತ್ತು ದೇಶ ಭಕ್ತಿಯನ್ನು ಬಡಿದೆಬ್ಬಿಸಿ, ನಮ್ಮಲ್ಲಿ ದೇಶಕ್ಕಾಗಿ ಏನಾದರೂ ಕಿಂಚಿತ್ ಅಳಿಲು ಸೇವೆ ಸಲ್ಲಿಸುವಂತೆ ಮನ ಪರಿವರ್ತನೆಯಾಗಬೇಕು, ಹಾಗಾದಲ್ಲಿ ಮಾತ್ರ ಈ ಆಚರಣೆ ಅರ್ಥ ಪೂರ್ಣವಾಗಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣೆಯ ಮುಖ್ಯ ಪಾಲಕರು ಮತ್ತು ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅಭಿಪ್ರಾಯಪಟ್ಟರು.

ನಗರದ ಪದವುನಲ್ಲಿರುವ ಶ್ರೀ ವೇದಮಾಯು ಆಯುರ್ವೇದ ಆಸ್ಪತ್ರೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣೆ ಪಡೆಯ ವತಿಯಿಂದ ಚಾಲನೆ ನೀಡಿ ಮಾತನಾಡಿದರು.

ಶ್ರೀ ವೇದಮಾಯು ಆಸ್ಪತ್ರೆಯ ಮುಖ್ಯ ವೈದ್ಯ ಡಾ|| ಕೇಶವ ರಾಜ್ ಮಾತನಾಡಿದರು. ಶ್ರೀ ವೇದಮಾಯು ಆಸ್ಪತ್ರೆಯ ವೈದ್ಯರು,ದಾದಿಯರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣಾ ತಂಡದ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

11/08/2022 04:41 pm

Cinque Terre

1.64 K

Cinque Terre

0

ಸಂಬಂಧಿತ ಸುದ್ದಿ