ಮುಲ್ಕಿ: ಮುಲ್ಕಿ ನಾಲ್ಕು ಪಟ್ನ ಮೊಗವೀರ ಮಹಾ ಸಭಾ ಪಟ್ನ ವತಿಯಿಂದ ಹೆಜಮಾಡಿ ಕೋಡಿ ಸಮುದ್ರ ತೀರದಲ್ಲಿ ಸಮುದ್ರ ಪೂಜೆ ನಡೆಯಿತು.
ಈ ಸಂದರ್ಭಮುಲ್ಕಿ ನಾಲ್ಕು ಪಟ್ನ ಮೊಗವೀರ ಮಹಾ ಸಭಾದ ಅಧ್ಯಕ್ಷ ಸಹದೇವ ಕರ್ಕೇರ ವಿಶೇಷ ಪ್ರಾರ್ಥನೆ ಸಲ್ಲಿಸಿ ಮಾತನಾಡಿ ಮೀನುಗಾರಿಕೆಗೆ ಉಪಯುಕ್ತವಾದ ಪಲ್ಕೆ ಬೀಳುವಂತೆ, ಮತ್ಸ್ಯ ಸಮೃದ್ಧಿಯಾಗುವಂತೆ ಹಾಗೂ ಬಹು ನಿರೀಕ್ಷಿತ ಹೆಜಮಾಡಿ ಮೀನುಗಾರಿಕಾ ಬಂದರು ಯೋಜನೆ ಶೀಘ್ರ ಅನುಷ್ಠಾನಗೊಂಡು ಸ್ಥಳೀಯರಿಗೆ ಹೆಚ್ಚು ಉದ್ಯೋಗಾವಕಾಶಗಳು ಲಭಿಸುವಂತೆ ಹಾಗೂ ಮೀನುಗಾರಿಕಾ ಸಂದರ್ಭ ಯಾವುದೇ ಅವಗಡಗಳು ಸಂಭವಿಸದಂತೆ ಪ್ರಾರ್ಥಿಸಿ ಸಮುದ್ರ ದೇವತೆಗೆ ಹಾಲು ಅರ್ಪಿಸಲಾಯಿತು.
ಸಮುದ್ರ ಪೂಜೆಗೆ ಮೊದಲು ಮುಲ್ಕಿ ನಾಲ್ಕು ಪಟ್ನ ಮೊಗವೀರ ಮಹಾ ಸಭಾದ ಸರ್ವ ಸದಸ್ಯರು ಹೆಜಮಾಡಿ ಕೋಡಿಯ ಬಪ್ಪನಾಡು ಶ್ರೀ ವಿಠೋಬ ಭಜನಾ ಮಂದಿರದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಭಜನಾ ಸಂಕೀರ್ತನೆ ಯೊಂದಿಗೆ ಸಮುದ್ರ ತೀರಕ್ಕೆ ಸಾಗಿ ಬಂದರು.
ಈ ಸಂದರ್ಭ ಮುಲ್ಕಿ ನಾಲ್ಕು ಪಟ್ನ ಮೊಗವೀರ ಮಹಾಸಭಾ ನೂತನ ಅಧ್ಯಕ್ಷ ಸುಜೀತ್ ಎಸ್ ಸಾಲ್ಯಾನ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
11/08/2022 12:05 pm